

ನೇಸರಗಿ: ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಸಮೀಪದ ವಣ್ಣೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸ.ಪ.ಪೂ ಕಾಲೇಜು ವಣ್ಣೂರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಬೈಲಹೊಂಗಲ ಕ್ಷೇತ್ರ ಶಿಕ್ಷಣಾಕಾರಿ ಎ.ಎನ್.ಪ್ಯಾಟಿ, ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಮಾಜಿ ಜಿಪಂ ಸದಸ್ಯ ನಿಂಗಪ್ಪ ಅರಕೇರಿ, ರವಿಕುಮಾರ ಪಾಟೀಲ, ಶಿವಲಿಂಗಪ್ಪ ಹೊಳಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಟೀಲ, ಉಪಾಧ್ಯಕ್ಷೆ ಸುರೇಖಾ ಪೋತಲಿ, ಪಿಎಸ್‌ಐ ವೈ.ಎಲ್.ಶೀಗಿಹಳ್ಳಿ, ಪಿಡಿಒ ಎಂ.ವೈ.ನಾಯ್ಕ, ಗ್ರಾಮ ಆಡಳಿತಾಕಾರಿ ಬಸವರಾಜ ಕೆರಕನವರ, ಸುಭಾಷ ಪಾಟೀಲ, ಮನೋಜ ಕೆಳಗೇರಿ, ಅರ್ಜುನ ಕಡೆಟ್ಟಿ, ಎಂ.ಎಸ್.ಬಾಗೇವಾಡಿ, ಪಿ.ಬಿ.ಶಿಂತ್ರಿ, ಪ್ರಿಯಾ ಸತ್ತಿಗೇರಿ, ಚಂದ್ರಕಲಾ ರೊಟ್ಟಿ ಇತರರಿದ್ದರು.