ಕ್ರೀಡೆಯಿಂದ ಏಕಾಗ್ರತೆ ಸಾಧಿಸಲಿ

18MNL1
Published on

ಮುನವಳ್ಳಿ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ದೈಹಿಕ ಶಿಕ್ಷಣ ನಿರ್ದೇಶಕ ಆರ್.ಎಚ್.ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುವ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.

ಮುಖ್ಯಶಿಕ್ಷಕಿ ಎಸ್.ಎನ್.ಜೋಶಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿ ಬಳಿಗಾರ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ ಹೊನ್ನಳ್ಳಿ, ಎಂ.ಎಂ. ಮುರನಾಳ, ಜಿ.ಎಸ್.ಚಿಪ್ಪಲಕಟ್ಟಿ, ಶಿಕ್ಷಕ ವೈ.ಬಿ. ಕಡಕೋಳ, ಎಸ್.ಆರ್.ಕರಡಿ, ಎಸ್.ವಿ.ಹಾವೇರಿ, ಎನ್.ಎಸ್.ಕಾರಭಾರಿ, ಡಿ.ಎಸ್.ಬಡಿಗೇರ, ಕೆ.ಎಲ್.ರಾಧಾ, ಎಸ್.ಆರ್. ನಾವಿ, ವಿ.ಎಸ್.ಹಿರೇಮಠ,

ಎಸ್.ಜಿ.ರಾಠೋಡ, ಸಿ.ಎಂ.ಪಾಟೀಲ, ಎಲ್.ಎಸ್.ಸಿಂಗಾರಗೊಪ್ಪ, ಪಿ.ಎ.ಹಳೇಜೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net