ಕ್ರೀಡೆಯಿಂದ ಶರೀರ, ಮನಸ್ಸು ಸದೃಢ

web3
ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡದೊಂದಿಗೆ ಪ್ರಸಾದ ರಾಂಪುರೆ, ಉಮೇಶ ಕಾಂಬಳೆ, ರಾಜು ಚೌಗಲೆ ಇತರರಿದ್ದಾರೆ.
Published on

ಚಿಕ್ಕೋಡಿ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಶರೀರದ ಜತೆಗೆ ಮನಸ್ಸು ಸದೃಢವಾಗುತ್ತದೆ ಎಂದು ಬೆಳಗಾವಿ ವಲಯ ವಿಟಿಯು ಪ್ರಾದೇಶಿಕ ಅಧಿಕಾರಿ ಶಿವಾನಂದ ಸಾರವಾಡೆ ಹೇಳಿದರು.

ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿ ವಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಅವರು ಮಾತನಾಡಿದರು. ಪಂದ್ಯಾವಳಿ ಉದ್ಘಾಟಿಸಿದ ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಮಾತನಾಡಿ, ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸುವುದು ಮುಖ್ಯ ಎಂದರು. ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ 13 ತಂಡಗಳು ಭಾಗವಹಿಸಿದ್ದವು.

ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪ್ರಥಮ, ಬೆಳಗಾವಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದ್ವೀತಿಯ ಸ್ಥಾನ ಗಳಿಸಿತು. ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ ಕಾಂಬಳೆ, ರಾಜು ಚೌಗಲೆ, ಯಲ್ಲಪ್ಪ ಮಾಚಕನೂರ, ಲಿಂಗರಾಜ ಯಮನೂರ, ಅಕ್ಷಯ ಕುಲಗುಡೆ, ಪ್ರವೀಣಕುಮಾರ ವಾಘಮೋರೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಡಾ.ಅರವಿಂದ ದೇಶಿ, ಗಣಪತಿ ಹುಲಗೆಜ್ಜಿ, ಅಂಜಲಿ ಮಠದ ಇದ್ದರು. ಸೃಷ್ಟಿ ಅರಬಾಳೆ ನಿರೂಪಿಸಿದರು. ಪದ್ಮರಾಜ ಮೆಕ್ಕಳಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net