

ಐನಾಪುರ: ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಬೀದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ ಎಂದು ಹಾರೂಗೇರಿ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು.
ಪಟ್ಟಣದಲ್ಲಿ ಹಾರೂಗೇರಿಯ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 5ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಠೇವು ಇಟ್ಟುಕೊಳ್ಳುವ ಜತೆಗೆ ಅರ್ಹ ವ್ಯಕ್ತಿಗಳಿಗೆ ಸಾಲ ವಿತರಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಹಾಗಾದಾಗ ಸಹಕಾರಿ ಸಂಘಗಳು ಪ್ರಗತಿ ಹೊಂದಲು ಸಾದ್ಯ ಎಂದರು.
ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ಮಾತನಾಡಿ, ಬ್ಯಾಂಕ್ ಹಾಗೂ ಸಾಲಗಾರರು ಒಂದು ಚಕ್ಕಡಿಯ ಎರಡು ಗಾಲಿಗಳು ಇದ್ದಂತೆ. ಎರಡೂ ಚಕ್ರ ಹೊಂದಾಣಿಕೆಯಿಂದ ಚಲಿಸಿದರೆ ಏಳಿಗೆ ಸಾಧ್ಯ ಎಂದರು. ಸಂಸ್ಥಾಪಕ ಬಿ.ವಿ.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.
ಪಪಂ ಸದಸ್ಯ ಅರುಣ ಗಾಣಿಗೇರ, ಪಿಕೆಪಿಎಸ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಅಭಯಗೌಡ ಪಾಟೀಲ, ಅಪ್ಪಾಸಾಬ ಪಾಟೀಲ, ಸುರೇಶ ಕಾಗಲೆ, ವಿನೋದ ಕೋಳೆಕರ, ಸುನೀಲ ಡೊಂಗರೆ, ಶ್ರೀಶೈಲ ನಾಂದನಿಕರ, ಬಾಳಾಸಾಬ ಪಾರಶೆಟ್ಟಿ, ರಾಜು ಗಾಣಿಗೇರ, ಅರವಿಂದ ನರೊಟ್ಟಿ, ಧರ್ಮಾಜಿ
ಕೋಳೆಕರ, ಅಣ್ಣಪ್ಪ ಬೋರಗಾಂವೆ, ಮಾರುತಿ ಸಲಗರ, ಪ್ರಕಾಶ ಕೋರ್ಬು ಇತರರಿದ್ದರು. ರವಿ ಬಿರಾದಾರ ವಂದಿಸಿದರು.