

ಅಥಣಿ: ಗಚ್ಚಿನಮಠವು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಶ್ರೀ ಮುರುಂದ್ರ ಶಿವಯೋಗಿಗಳ ದಿವ್ಯಶಕ್ತಿಯಿಂದ ಅಥಣಿ ನೆಲ ಪಾವನವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಶರಣ ಸಂಸತಿ ಉತ್ಸವ, ಬಸವತತ್ತ$್ವ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನಡೆ&ನುಡಿಯಂತೆ ಶಿವಯೋಗಿಗಳು ಬದುಕಿ ತೋರಿಸಿದ್ದಾರೆ. ಶಿಣ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಡಾ.ಹರ್ಡೇಕರ ಮಂಜಪ್ಪ ಅವರಿಗೆ ದೀೆ ನೀಡಿ ಸಮಾಜಮುಖಿ ಸೇವೆಗೆ ಪ್ರೇರಣೆ ನೀಡಿದ್ದಾರೆ. ವೀರಶೈವ ಲಿಂಗಾಯತ ಮಠ&ಮಾನ್ಯಗಳು ಶಿಣ, ದಾಸೋಹ ಸೇವೆಯಲ್ಲಿ ಮುಂಚೂಣಿಯಲ್ಲಿವೆ. ಬೆಳಗಾವಿಯ ಕೆಎಲ್ಇ, ವಿಜಯಪುರದ ಬಿಎಲ್ಡಿ, ಬಾಗಲಕೋಟೆಯ ಬಿವಿವಿ ಸಂ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂ ಸ್ಥಾಪನೆಯಾಗಿವೆ. ಉತ್ತರ ಕರ್ನಾಟಕದಲ್ಲಿ ಶಿಣ, ದಾಸೋಹ ಪರಂಪರೆಗೆ ಇಲ್ಲಿಯ ಮಠ&ಮಾನ್ಯಗಳು ಶ್ರಮಿಸಿವೆ ಎಂದರು.
ಇಂದು ಕೆಎಲ್ಇ ಸಂಸ್ಥೆ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಕಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುವ ಮೂಲಕ ಕಾನ್ಸರ್ ರೋಗಿಗಳಿಗೆ ವೈದ್ಯಕಿಯ ಸೇವೆ ಸಿಗುವಂತೆ ಸುವ್ಯವಸ್ಥೆ ಮಾಡಿದೆ. ಇದಕ್ಕೆ ದಿ.ಡಾ. ಸಂಪತಕುಮಾರ ಶಿವಣಗಿ ದಾನವು ಕಾರಣ. ಅಥಣಿ ದಾನಿಗಳ ಮಹಾತ್ಮರ ಬೀಡಾಗಿದೆ ಎಂದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಗಚ್ಚಿನಮಠದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮಗಳು ನಾಡಿಗೆ ಮಾದರಿಯಾಗಿವೆ ಎಂದು ಹೇಳಿದರು.
ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗಚ್ಚಿನಮಠ ಶಿವಯೋಗದ ಕಳಸವಾಗಿದೆ. ಶಿವಯೋಗಿಗಳಿಂದ ಆರ್ಶೀವಾದ ಪಡೆದು ಧಾರವಾಡಕ್ಕೆ ಆಗಮಿಸಿದ ಮೃತ್ಯುಂಜಯ ಸ್ವಾಮೀಜಿ ಮತ್ತು ಮಹಾಂತ ಸ್ವಾಮೀಜಿ ಶಿಣ,ದಾಸೋಹ ಆರಂಭಿಸಿ ಲಾಂತರ ವಿದ್ಯಾರ್ಥಿಗಳಿಗೆ ಅರಿವು, ಅನ್ನ, ಆಶ್ರಯ ನೀಡುವ ಉದ್ದೇಶದಿಂದ ಮುರುಘಾಮಠ ಸ್ಥಾಪನೆ ಮಾಡಿದ್ದಾರೆ ಎಂದರು.
ಚಿತ್ರದುರ್ಗ ಮುರುರಾಜೇಂದ್ರ ಬ್ರಹನ್ಮಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಗಚ್ಚಿನಮಠ ಬಸವ ತತ್ತ$್ವದ ತಾಯಿ ಬೇರಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳ ಬದುಕು ಎಲ್ಲರಿಗೂ ದಾರಿದೀಪ ಎಂದರು.
ಬಣಜವಾಡ ಶಿಣ ಸಂಸ್ಥೆ ಮತ್ತು ಮರುಳಶಂಕರ ಶಾಲೆಯ ಮಕ್ಕಳಿಂದ ವಚನ ನೃತ್ಯರೂಪಕಗಳು ಜರುಗಿದವು. ಪುರಸಭೆ ಅಧ್ಯೆ ಶಿವಲೀಲಾ ಬುಟಾಳೆ, ಶಿವಗೌಡ ನೇಮಗೌಡ, ಕೇದಾರಿ ತೇರದಾಳ, ಪ್ರವಿಣ ಹುಣಸಿಕಟ್ಟಿ ಅವರನ್ನು ಸತ್ಕರಿಸಲಾಯಿತು. ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶ್ಯಾಮರಾವ ಪೂಜಾರಿ, ರಮೆಶ ಸಿಂಧಗಿ, ಎ.ಎಂ.ಖೊಬ್ರಿ, ರಮೇಶ ಪಾಟೀಲ ಇತರರಿದ್ದರು.