ಸೆ.22ರಿಂದ ಅಂಬಾಮಠದಲ್ಲಿ ಶರನ್ನವರಾತ್ರೋತ್ಸವ

Ambadevi
ಶ್ರೀ ಅಂಬಾದೇವಿ ಮೂರ್ತಿ
Published on

ಸಿಂಧನೂರು: ತಾಲೂಕಿನ ಸುಕ್ಷೇತ್ರ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಉತ್ಸವ ಅಂಗವಾಗಿ ಸೆ.22 ರಿಂದ ಅ.3ರವರೆಗೆ ಶರನ್ನವರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಂಬಾದೇವಿ ದೇವಸ್ಥಾನ ಸಮಿತಿ ಇಒ ಅರುಣ್ ದೇಸಾಯಿ ಹಾಗೂ ಅಧ್ಯಕ್ಷ ಎಂ.ರಂಗನಗೌಡ ಗೊರೇಬಾಳ ತಿಳಿಸಿದ್ದಾರೆ.

ಸೆ.22 ರಿಂದ ಅ.3 ರವರೆಗೆ ಪ್ರತಿನಿತ್ಯ ಕಾಕಡಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ, ಮಹಾನೈವೇದ್ಯ, ರಾತ್ರಿ ಮಹಾ ಮಂಗಳಾರತಿ ಜರುಗಲಿವೆ. ನಿತ್ಯ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರವಚನಕಾರ ಶಿವಾಚಾರ್ಯಸ್ವಾಮಿ ಹಿರೇಮಠ ಗಿಣಿವಾರ ಅವರಿಂದ ಶ್ರೀದೇವಿ ಪುರಾಣ, ಸೆ.26ರಂದು ಮಧ್ಯಾಹ್ನ 1 ರಿಂದ ಐಶ್ವರ್ಯರಾನಿ ಬೂದಿಹಾಳ ಹಾಗೂ ಬೆಂಗಳೂರು ತಂಡದಿಂದ ಸುಗಮ ಸಂಗೀತ ಗಾಯನ, ಸೆ.30 ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡ ಆಕಾಶವಾಣಿ ಕಲಾವಿದ ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದ್ದಾರೆ.

ಅ.1ರ ಮಹಾನವಮಿಯಂದು ಅಂಬಾದೇವಿ ಸನ್ನಿಧಾನದಲ್ಲಿ ಅರ್ಚಕ ಗುರುದತ್ತ ಅವರಿಂದ ನವ ಚಂಡಿಯಾಗ, 2 ರಂದು ವಿಜಯದಶಮಿ ಇದ್ದು, ರಾತ್ರಿ 8 ಗಂಟೆಗೆ ತೊಟ್ಟಿಲು ಸೇವೆ, 3ರಂದು ರಾತ್ರಿ 7 ಗಂಟೆಗೆ ಶ್ರೀದೇವಿ ಉತ್ಸವದೊಂದಿಗೆ ಸಿಮೋಲ್ಲಂಘನ, ಅಪರಾಜಿತ ಶಮೀವೃಕ ್ಷ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net