

ಮೂಡಲಗಿ: ಆಧ್ಯಾತ್ಮಿಕ ಜ್ಞಾನದ ಮಾರ್ಗವಾಗಿರುವ ಸತ್ಸಂಗದಿಂದ ಸದ್ಗುಣ ಬೆಳೆದು, ಜೀವನದ ಮೌಲ್ಯ ವೃದ್ಧಿಸುತ್ತವೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಟಕ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮ ಶ್ಲಾನೀಯ ಎಂದು ಗೋಕಾಕ ಶೂನ್ಯಸಂಪಾದನ ಮಠದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ೌಂಡೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 43ನೇ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪ ಅಧ್ಯ ಡಾ.ಸಂಜಯ ಶಿಂದಿಹಟ್ಟಿ ಮಾತನಾಡಿ, ಹೊರಗಿನ ಜಗತ್ತನ್ನು ಟಿಕೀಸುವುದಕ್ಕಿಂತ ಮೊದಲು ತಮ್ಮೊಳಗೆ ಇರುವ ಲೋಪ ದೋಷ ಪರೀಸಿಕೊಳ್ಳಲು ಹೆಚ್ಚಿನ ಮಹತ್ವ ನೀಡಬೇಕೆಂದು ತಿಳಿಸಿದ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ ಅವರ ದೃಷ್ಟಿಕೋನಗಳನ್ನು ವಚನಗಳ ಮೂಲಕ ವಿವರಿಸಿದರು.
ಪ್ರವಿಣ ದೇಸುರಕರ, ವಿಜಯಲಕ್ಷಿ$್ಮ ಬುದ್ನಿ ಅನ್ನಸಂತರ್ಪಣೆ ಸೇವೆ ಮಾಡಿದರು. ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಹನುಮಂತ ಸೊರಗಾವಿ, ಎ.ಎಚ್.ವಂಟಗೊಡಿ, ಬಿ.ವೈ.ಶಿವಾಪುರ, ಬಿ.ಆರ್.ತರಕಾರ, ಆರ್.ಟಿ.ಲಂಕೇಪ್ಪನವರ, ವಿ.ಎಸ್.ಹಂಚಿನಾಳ, ಸುಭಾಷ ಕುರಣೆ, ಶಿವಾನಂದ ಕಿತ್ತೂರು, ಸಂತೋಷ ಪಾಟೀಲ, ಸಿದ್ರಾಮ ದ್ಯಾಗನಟ್ಟಿ, ಮಹಾದೇವ ಜಿಡ್ಡಿಮನಿ, ಸುಭಾಷ ಮಾವಿನಂದಿ, ಶಿವಾನಂದ ಕುಂಬಾರ, ಮಹೇಶ ಹಿರೇಮಠ, ಭಾಗೀರಥಿ ಕುಳಲಿ ಇತರರಿದ್ದರು. ಮಾಧವಿ ಸೋನಾವಾಲ್ಕರ ಪ್ರಾರ್ಥಿಸಿದರು. ಪ್ರಶಾಂತ ಮಲ್ಲನಗೌಡರ ವಚನ ಗಾಯನ ಹಾಡಿದರು. ಸುರೇಶ ಲಂಕೇಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಸಲ್ಲಾಗೋಳ ನಿರೂಪಿಸಿದರು. ಸಿ.ಎಸ್.ಮೋಹಿತೆ ವಂದಿಸಿದರು.