ಸಂತೆಯಿಂದ ವ್ಯವಹಾರ ಜ್ಞಾನ ಅರಿವು

3
ಇಂಚಲದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗಿಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಪೂರ್ಣಾನಂದ ಸ್ವಾಮೀಜಿ ತರಕಾರಿ ಖರೀದಿಸಿದರು. ಬಿ.ಪಿ.ತುಪ್ಪದ, ಬಿ.ಎಂ.ವಾರಿ, ಎಸ್.ಬಿ.ಬಿದರಗಡ್ಡಿ ಇತರರಿದ್ದರು.
Published on

ಬೈಲಹೊಂಗಲ: ಮಕ್ಕಳಲ್ಲಿ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಿರುವುದು ಒಳ್ಳೆಯ ಕಾರ್ಯ ಎಂದು ಪೂರ್ಣಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಇಂಚಲದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗಿಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ, ಲಾಭ-ನಷ್ಟದ ಪರಿಕಲ್ಪನೆ ಮೂಡಿಸಲು ಶಾಲೆಗಳಲ್ಲಿ ಆಟ-ಪಾಠದ ಜತೆಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯದು ಎಂದರು.

ಸಂತೆಯಲ್ಲಿ ತರಕಾರಿ, ಸೊಪ್ಪು, ಸಿಹಿ ಖಾದ್ಯ ಸೇರಿ ವಿವಿಧ ಬಗೆಯ ಪದಾರ್ಥಗಳನ್ನು ವಿದ್ಯಾರ್ಥಿಗಳು ಮಾರಿದರು. ಮುಖ್ಯ ಶಿಕ್ಷಕ ಬಿ.ಪಿ.ತುಪ್ಪದ, ಶಿಕ್ಷಕರಾದ ಬಿ.ಎಂ.ವಾರಿ, ಎಸ್.ಬಿ.ಬಿದರಗಡ್ಡಿ, ಎಚ್.ಎಸ್.ಲಮಾನಿ, ಎಂ.ಎನ್.ಹಾವೇರಿ, ಸಿ.ಆರ್.ಹೈಬತ್ತಿ, ಎಸ್.ಎಂ.ಹತ್ತಿಕಟಗಿ, ಬಿ.ಎಂ.ಮಾನೆ, ಪೋಷಕರು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net