

ತೆಲಸಂಗ: ದೇಶದ ಮೌಲ್ಯ, ಸ್ವಾವಲಂಬಿ ಭಾರತ ನಿರ್ಮಿಸಲು ಆರ್‌ಎಸ್‌ಎಸ್ ಶಿಸ್ತು, ಸಂಸ್ಕಾರ ಮತ್ತು ಸಮರ್ಪಣಾಭಾವ ತುಂಬುತ್ತಿದೆ ಎಂದು ಬೆಳಗಾವಿ ವಿಭಾಗ ಕಾರ್ಯವಾಹಕ ಸಂಜಯ ಅಡಕೆ ಹೇಳಿದರು.
ಗ್ರಾಮದ ಎಂ.ಜಿ.ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆರೆಸ್ಸೆಸ್‌ನಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿ, ಡಾ.ಹೆಡಗೇವಾರ್ ಅವರು 1925ರಲ್ಲಿ ಹಿಂದುತ್ವದ ರಕ್ಷಣೆ ಮತ್ತು ಸಮಾಜದ ಏಕತೆಯ ದೂರದೃಷ್ಟಿಯಿಂದ ಆರೆಸ್ಸೆಸ್ ಸ್ಥಾಪಿಸಿದರು. ಶಾಖೆ ಸಂಸ್ಕಾರ, ಶಿಸ್ತು, ತ್ಯಾಗ, ಕಾನೂನು ಪಾಲನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸ್ವಯಂ ಸೇವಕರಲ್ಲಿ ಮೂಡಿಸುತ್ತದೆ. ಮಕ್ಕಳನ್ನು ಆರೆಸ್ಸೆಸ್‌ಗೆ ಕಳುಹಿಸಿದರೆ ಅವರ ವ್ಯಕ್ತಿತ್ವ ಬೆಳೆಯುತ್ತದೆ ಎಂಬ ನಂಬಿಕೆ ಸಂಘದ ವಿರೋಧಿಗಳಲ್ಲೂ ಕಾಣುತ್ತಿದ್ದೇವೆ ಎಂದರು.
ಹಿರೇಮಠದ ವೀರೇಶ್ವರ ದೇವರು, ಹಿರಿಯ ಸ್ವಯಂಸೇವಕರಾದ ಸಂತೋಷ ಕುಲಕರ್ಣಿ, ಕೇಶ ಉಂಡೋಡಿ ಇತರರಿದ್ದರು.