ಆರ್‌ಎಸ್‌ಎಸ್‌ನಿಂದ ನಿಧಿ ಸಮರ್ಪಣಾ ಅಭಿಯಾನ

14blh1rss baithak-Web
ಬೈಲಹೊಂಗಲದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕ.ಉ ಪ್ರಾಂತ ಸಹ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ಮಾತನಾಡಿದರು. ಧರ್ಮ ಜಾಗರಣ ಪ್ರಾಂತ ಸಂಯೋಜಕ ದಿಲೀಪಜಿ ಇದ್ದರು.
Published on

ಬೈಲಹೊಂಗಲ: ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಮಂದಿರ ನಿರ್ಮಾಣಕ್ಕಾಗಿ ಜ.14ರಿಂದ ಫೆ.15ರವರೆಗೆ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ದೇಶದ ಎಲ್ಲ ಜನತೆ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ಹೇಳಿದ್ದಾರೆ.

ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನ, ನಿರ್ವಹಣಾ ಟೋಳಿ ಕುರಿತು ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಜರುಗಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತಾಲೂಕಿನ ವಿವಿಧ ಕ್ಷೇತ್ರಗಳ ಪದಾಧಿಕಾರಿಗಳ ವಿಸ್ತ್ರತ ಬೈಠಕ್ ನೇತೃತ್ವವಹಿಸಿ ಅವರು ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಪ್ರತಿಯೊಂದು ಮನೆ, ಗ್ರಾಮಗಳಿಗೆ ತೆರಳಿ ಕನಿಷ್ಠ 10 ರೂ., ಗರಿಷ್ಠ ಎಷ್ಟಾದರೂ ಪಡೆದುಕೊಂಡು ರಸೀದಿ ನೀಡಬೇಕು ಎಂದರು.

ಧರ್ಮ ಜಾಗರಣ ಪ್ರಾಂತ ಸಂಯೋಜಕ ದಿಲೀಪಜಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಪ್ರಾಚೀನ ಸಂಸ್ಕೃತಿ ಹೊಂದಿರುವ ದೇಶ ಭಾರತ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದರು.

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ವಿಶ್ವ ಹಿಂದು ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹಕ ಚಿದಂಬರ ಮೇಟಿ, ಜಿಲ್ಲಾ ಸಹ ವ್ಯವಸ್ಥಾ ಪ್ರಮುಖ ಸುಧೀಂದ್ರ ಹಂಪಿಹೊಳಿ, ಅಶೋಕ ಸವದತ್ತಿ, ಶಿವಾನಂದ ಬಡ್ಡಿಮನಿ, ವಿವೇಕಾನಂದ ಪೂಜಾರ, ಮಲ್ಲಿಕಾರ್ಜುನ ಏಣಗಿಮಠ, ಯಲ್ಲಪ್ಪ ದೇವರಹುಬ್ಬಳ್ಳಿ, ಮಂಜುನಾಥ ಜಾಧವ, ಬಸವರಾಜ ಈಟಿ, ಕುಮಾರ ಹೂಗಾರ, ರಾಜು ಬಡಿಗೇರ, ಬಸವರಾಜ ದೊಡಮನಿ, ಈರಪ್ಪ ಕಾಡೇಶನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net