ರಸ್ತೆ ಸುಧಾರಣೆಯಿಂದ ಅಭಿವೃದ್ಧಿ

12Rayabag10
Published on

ರಾಯಬಾಗ: ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ಆರ್ಥಿಕ ಪ್ರಗತಿಯ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ರಾಯಬಾಗ-ಜಲಾಲಪುರ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ಜಿಪಂ ಅನುದಾನದಲ್ಲಿ ತಾಲೂಕಿನ ಬಾವನಸೌಂದತ್ತಿ ಮತ್ತು ಸೌಂದತ್ತಿವಾಡಿಗಳಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಕಲಿಕೆಗೆ ಮೊದಲ ಹೆಜ್ಜೆಯಾದ ಅಂಗನವಾಡಿ ಕೇಂದ್ರಗಳನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಸಿಬ್ಬಂದಿ ಮಗುವಿನ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ಲೋಕೋಪಯೋಗಿ ಇಲಾಖೆ ಎಇಇ ಆರ್.ಬಿ. ಮನುವಡ್ಡರ, ಸಿಡಿಪಿಒ ಭಾರತಿ ಕಾಂಬಳೆ, ಸದಾಶಿವ ಘೋರ್ಪಡೆ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಬಾವನಸೌಂದತ್ತಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಆಜಾದ್ ತಾಸಿವಾಲೆ, ಪಿಡಿಒ ಎಸ್.ಎಸ್. ನ್ಯಾಮಗೌಡರ, ತಾತ್ಯಾಸಾಹೇಬ ಕಾಟೆ, ಶಾಂತಿನಾಥ ಪಾಟೀಲ, ಅನಿಲ ಹಂಜೆ, ಸತ್ಯಪ್ಪ ಬಿಷ್ಠೆ, ದತ್ತಾ ಜಾಧವ, ಸುರೇಶ ಮಾಳಿ, ಮಹೇಶ ಕರಮಡಿ,

ಅಜಿತ ಖೆಮಲಾಪೂರೆ, ರಂಜಾನ್ ಮಕಾನದಾರ್, ಗೋಪಾಲ ಕೊಚೇರಿ, ಮಾರುತಿ ಬಂತೆ, ಮಜ್ಜಿದ್ ಡಾಂಗೆ, ಜಿಯಾವುಲ್ಲಾ ಮುಲ್ಲಾ, ಯೂನಸ್ ಮುಲ್ಲಾ, ಮಹೇಶ ಕುಲಗೂಡೆ, ಭಾರತಿ ಲೋಹಾರ, ಸನ್ಮತಿ ಶೆಟ್ಟಿ, ರಾಕೇಶ ಅವಳೆ, ಸುಭಾಸ ಕಾಂಬಳೆ, ಶ್ರೀಧರ ಮೇಗಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net