ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ

26 SIRWAR 03
ಸಿರವಾರ ತಾಲೂಕಿನ ದಿಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ್ ದೀಪೋತ್ಸವ ಕಾರ್ಯಕ್ರಮ ನಡೆಯಿತು. ನೀಲಗಲ್ ಮತ್ತು ಎನ್.ಗಣೇಕಲ್ ಶಾಂಭವಿ ಮಠದ ಡಾ.ಪಂಚಾಕ್ಷರಿ ಸ್ವಾಮೀಜಿ, ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ , ಮಾನ್ವಿ ಕಲ್ಮಠದ ವಿರೂಪಾಕ್ಷಪಂಡಿತರಾಧ್ಯ ಸ್ವಾಮೀಜಿ, ಜಾಗಟಗಲ್ ಬೆಟ್ಟದಯ್ಯಪ್ಪ ಸ್ವಾಮೀಜಿ, ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಎಚ್.ಮಹಾಂತೇಶ ಪಾಟೀಲ್ ಇತರರಿದ್ದರು.
Published on

ಸಿರವಾರ: ತಾಲೂಕಿನ ಅತ್ತನೂರು ಗ್ರಾಮದ ದಿಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕಾರ್ತಿಕ ಮಹೋತ್ಸವದ ಪ್ರಯುಕ್ತ ದೀಪೋತ್ಸವ ನಡೆಯಿತು. ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೀಪವು ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಹೊಡೆದೊಡಿಸಿ ಬೆಳಕಿನೆಡೆಗೆ ಕರೆದುಕೊಂಡು ಹೋಗುತ್ತದೆ.

ದೇವಸ್ಥಾನದ ಸಮಿತಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸುತ್ತಿದ್ದು, ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಮೊಟ್ಟಮೊದಲ ಬಾರಿಗೆ ಅತ್ತನೂರಿನ ಆರಾಧ್ಯದೈವ ದಿಡ್ಡಿಬಸವೇಶ್ವರರ ಚರಿತ್ರೆಯ ಪುರಾಣ ಪ್ರವಚನ ನಡೆಯಿತು. ನಂತರ ಹಾಸ್ಯ ಸಂಜೆ, ಸಂಗೀತ ರಸ ಮಂಜರಿ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net