

ಬ್ಯಾಡಗಿ: ಪ್ರಸಿದ್ದ ಪ್ರವಚನಕಾರರು ಹಾಗೂ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪಟ್ಟಣದ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ನ. 13ರಿಂದ 24ವರೆಗೆ 12 ದಿನ ಜರುಗಲಿದೆ.
ನ. 13ರಿಂದ ನಿತ್ಯ ಸಂಜೆ 6 ಗಂಟೆಯಿಂದ 7ವರೆಗೆ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀಗಳ ನೇತೃತ್ವದಲ್ಲಿ ಅಧ್ಯಾತ್ಮ ಪ್ರವಚನ ಪ್ರಯುಕ್ತ ಪಟ್ಟಣದ ವಿವಿಧ ಬಡಾವಣೆ ಹಾಗೂ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಬೆಳಗ್ಗೆ 6.30ಕ್ಕೆ ಜರುಗಲಿದೆ. ನ. 14ರಂದು ಬ್ಯಾಡಗಿ ನಗರದ ಚಂದ್ರಗುತ್ತೆಮ್ಮದೇವಿ ದೇವಸ್ಥಾನದಿಂದ ಸದ್ಭಾವನಾ ಪ್ರಾರಂಭವಾಗಿ ಮದಗಮ್ಮನ ದೇವಸ್ಥಾನ, ತಳವಾರ ಓಣಿ, ಹೊಂಡದ ಓಣಿ, ಸೋಗಿನ ಓಣಿ, ಬಸವೇಶ್ವರ ನಗರ ಪೋಸ್ಟ್ ಆಪೀಸ್ ರಸ್ತೆ ಮೂಲಕ ವಾಜಪೇಯಿ ರಂಗಮಂದಿರದಲ್ಲಿ ಮುಕ್ತಾಯವಾಗಲಿದೆ.
ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಶ್ರೀಗಳ ಪ್ರವಚನ ಆಲಿಸುವ ಮೂಲಕ ಧಾರ್ವಿುಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರವಚನ ಸೇವಾ ಸಮಿತಿ ಪ್ರಕಟಣೆ ಮೂಲಕ ಕೋರಿದೆ.