ಇನ್ಮುಂದೆ ಮೆಗ್ಗಾನ್‌ನಲ್ಲಿ ಔಷಧ ಹೊರಗೆ ಬರೆಯವಂತಿಲ್ಲ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

minister dr.sharana prakash patil
ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
Published on

ಶಿವಮೊಗ್ಗ: ಪ್ರತಿ ವರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಔಷಧಗಳಿಗೆ 20 ಕೋಟಿ ರೂ.ಗಿಂತ ಅಧಿಕ ವ್ಯಯ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಔಷಧವನ್ನು ಹೊರಗಡೆ ಬರೆದುಕೊಡುವಂತಿಲ್ಲ. ಹೊರಗಡೆ ಬರೆದುಕೊಟ್ಟಿದ್ದು ಗಮನಕ್ಕೆ ಬಂದರೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.

ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇಲ್ಲ. ಸಾಕಷ್ಟು ಹಣ ಬಿಡುಗಡೆ ಆಗುತ್ತಿದೆ. ಇನ್ಮುಂದೆ ಎಲ್ಲ ಔಷಧಗಳೂ ಮೆಗ್ಗಾನ್ ಆಸ್ಪತ್ರೆಯಲ್ಲೇ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಡಿ ಗ್ರೂಪ್ ಮತ್ತು ಸ್ಕ್ಯಾವೆಂಜರ್ ವರ್ಗವಿದ್ದು ಮೊದಲು ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತಿತ್ತು. ಇದೀಗ ಸ್ಕ್ಯಾವೆಂಜರ್ ವಿಭಾಗದ ಸಿಬ್ಬಂದಿ ವೇತನ ಹೆಚ್ಚಳವಾಗಿರುವುದೇ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಿದರು.
ಮೆಗ್ಗಾನ್‌ನಲ್ಲಿ ಪ್ರತಿದಿನ 125 ಸಿಟಿ ಸ್ಕಾೃನ್ ನಡೆಯುತ್ತಿದೆ. 25ರಿಂದ 26 ಹೆರಿಗೆಗಳಾಗುತ್ತಿವೆ. ಅದರಲ್ಲಿ 14ರಿಂದ 15 ಸಹಜ ಪ್ರಸವ ಆಗಿದ್ದರೆ ಉಳಿದವು ಶಸ್ತ್ರಚಿಕಿತ್ಸೆ ಮೂಲಕ ನಡೆಯುತ್ತಿದೆ. ಎಬಿಆರ್‌ಕೆ(ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ) ಮೂಲಕ ಮುಂದಿನ ದಿನಗಳಲ್ಲಿ 25 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net