ಇನ್ಮುಂದೆ ಅಂಬೇಡ್ಕರ್, ಸಂವಿಧಾನದ ಹೆಸರೇಳಬೇಡಿ

ex minister k.s.eshwarappa
Published on

ಶಿವಮೊಗ್ಗ: ಮುಸ್ಲಿಮರಿಗೆ ಸಾಮಾನ್ಯ ವರ್ಗದಲ್ಲೂ ಪಾಲು ನೀಡಲಾಗುತ್ತಿದೆ. ಇದೀಗ ವಸತಿ ಮೀಸಲಾತಿ ನೀಡಲು ಹೊರಟಿರುವುದು ಯಾವ ನ್ಯಾಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಯಾವ ಕಾರಣಕ್ಕೆ ಮೀಸಲಾತಿ ಹೆಚ್ಚಳ ಮಾಡುತ್ತಿದ್ದೇವೆ ಎಂಬ ವಿಷಯವನ್ನು ಜನರ ಮುಂದಿಡಬೇಕೆಂದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದರು.

ಮುಸ್ಲಿಮರ ಮತ ಓಲೈಕೆಗಾಗಿ ಮೀಸಲಾತಿ ಹೆಚ್ಳಳ ಮಾಡುತ್ತಿದ್ದೇವೆಂದು ನೇರವಾಗಿ ಹೇಳಬೇಕು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರು ಇನ್ಮುಂದೆ ಅಂಬೇಡ್ಕರ್, ಸಂವಿಧಾನದ ಹೆಸರು ಹೇಳಬಾರದು ಎಂದರು. ಧರ್ಮಾಧಾರಿತ ಮೀಸಲಾತಿ ಕೊಡಲು ಹೊರಟಿರುವುದನ್ನು ಹಿಂದು ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದನ್ನು ಸಿಎಂ, ಡಿಸಿಎಂ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net