

ಆನೇಕಲ್ : ಆನೇಕಲ್ ತಾಲೂಕು ಹಾಗೂ ಬೆಂಗಳೂರು ದಣ ವಿಧಾನಸಭಾ ಕ್ಷೇತ್ರದಲ್ಲಿ ವೀಣೆ ಮಾಡಿದ್ದೇನೆ. ಮುಂದೆ ಇದು ಬೆಂಗಳೂರು ಸಿಟಿ ವ್ಯಾಪ್ತಿಗೆ ಸೇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರು ದಣ ವಿಧಾನಸಭಾ ಕ್ಷೇತ್ರ ಹಾಗೂ ಆನೇಕಲ್ ತಾಲೂಕಿನಲ್ಲಿ ಸಂಚಾರ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಕ್ರವಾರ ಅಧಿಕಾರಿಗಳ ಜತೆ ಸಭೆ ಇದೆ. ಈ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಹಾಗೂ ಸಿಟಿ ವ್ಯಾಪ್ತಿಗೆ ಸೇರುವುದರಿಂದ ಏನೇನು ಮಾಡಬೇಕು, ಬೆಂಗಳೂರು ವ್ಯಾಪ್ತಿಗೆ ಸೇರಿದ ನಂತರ ಏನೇನು ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಆಗಬೇಕಿದೆ. ಈ ನಿಟ್ಟಿನಲ್ಲಿ ಆನೇಕಲ್ ಶಾಸಕಬಿ.ಶಿವಣ್ಣ ಹಾಗೂ ಬೆಂಗಳೂರು ದಣ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರೊಂದಿಗೆ ಸಂಚಾರ ಮಾಡಿದ್ದು, ಅವರಿಂದಲೂ ಕೆಲವು ಮಾಹಿತಿ ಪಡೆದಿದ್ದೇನೆ ಎಂದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಯೋಕಾನ್ ರಸ್ತೆ ಇಷ್ಟು ದಿನ ಸಿಟಿ ವ್ಯಾಪ್ತಿಯಲ್ಲಿ ಇರಲಿಲ್ಲ. ಇನ್ನು ಮುಂದೆ ಅದು ಬೆಂಗಳೂರು ವ್ಯಾಪ್ತಿಗೆ ಸೇರುವುದರಿಂದ ಆದಷ್ಟು ಬೇಗ ಅಭಿವೃದ್ಧಿ ಮಾಡುತ್ತೇವೆ ಎಂದರು. ಶಾಸಕ ಬಿ.ಶಿವಣ್ಣ, ಬಮುಲ್ ಮಾಜಿ ಅಧ್ಯ ಆರ್.ಕೆ. ರಮೇಶ್, ಮುಖಂಡರಾದ ಹಳೆ ಚಂದಾಪುರ ಶ್ರೀಧರ್, ಜಿಗಣಿ ಪುರಸಭೆ ಸದಸ್ಯ ಆನಂದ್ ಗೌಡ, ಆನಂದ್ ರೆಡ್ಡಿ, ಮಾಜಿ ರವಿ, ಹಾಪ್ಕಾಮ್ಸ್ ಬಾಬುರೆಡ್ಡಿ, ಗಟ್ಟಹಳ್ಳಿ ಸೀನಪ್ಪ, ಮುಖಂಡರಾದ ಇಂಜಿನಿಯರ್ ಸಂಪಗಿರಾಜ್,ಜಿಗಣಿ ಪುರಸಭೆ ಉಪಾಧ್ಯೆ ಸವಿತಾ ಮುರಳಿ, ಪುರಸಭೆ ಸದಸ್ಯರಾದ ಆನಂದ್ ಗೌಡ, ಜಿಗಣಿ ವಿನೋದ್,ಫ್ಯಾನ್ಸಿ ರಮೇಶ್, ಹರೀಶ್, ಶಿಲ್ಪಾ, ಮಧು, ಅಮೃತ ಮಂಜು, ಮಂಜುನಾಥ್ ರೆಡ್ಡಿ, ಪಿ. ಕುಶಾಲ್ ಇತರರು ಇದ್ದರು.
ಎಲ್ಲೆಲ್ಲಿ ರೌಂಡ್ಸ್?: ಬೆಂಗಳೂರು ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬನ್ನೇರುಟ್ಟ ರಸ್ತೆಯ ಮಾರ್ಗವಾಗಿ ಜಿಗಣಿ ಹಾಗೂ ಆನೇಕಲ್ ಮಾರ್ಗವಾಗಿ ರೌಂಡ್ಸ್ ಹಾಕಿದರು. ಗುರುವಾರ ಸಂಜೆ ಬನ್ನೇರುಟ್ಟ ರಸ್ತೆಯ ಕೋಳಿ ಫಾಮ್ರ್ ಬಳಿ ಅಧಿಕಾರಿಗಳ ಜತೆ ಹಾಗೂ ಬೆಂಗಳೂರು ದಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರೊಂದಿಗೆಕಾರಿನಲ್ಲಿ ಹೊರಟ ಡಿಸಿಎಂ, ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಆಗಮಿಸಿದರು. ಆನೇಕಲ್ ಶಾಸಕ ಬಿ. ಶಿವಣ್ಣ ಹಾಗೂ ಜಿಗಣಿ ಪುರಸಭೆ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಗಣಿ ಎಪಿಸಿ ವೃತ್ತದ ಬಳಿ ಸ್ವಾಗತ ಕೋರಿದರು. ಬಳಿಕ ಒಂದೇ ಕಾರಿನಲ್ಲಿ ಡಿ.ಕೆ. ಶಿವಕುಮಾರ್, ಶಾಸಕರಾದ ಎಂ. ಕೃಷ್ಣಪ್ಪ, ಬಿ. ಶಿವಣ್ಣ ಬೊಮ್ಮಸಂದ್ರ ಮಾರ್ಗವಾಗಿ ಚಂದಾಪುರ ಹಾಗೂ ಮುತ್ತಾನಲ್ಲೂರಿಗೆ ಪ್ರಯಾಣ ಬೆಳೆಸಿದರು. ಜಿಗಣಿಯಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಡಬಲ್ ರೋಡ್ ಸಂಪೂರ್ಣವಾಗಿ ಗುಂಡಿಗಳಿಂದ ಕೂಡಿತ್ತು. ಬನ್ನೇರುಟ್ಟ ರಸ್ತೆಯ ಮಾರ್ಗವಾಗಿ ಬೊಮ್ಮಸಂದ್ರಕ್ಕೆ ತೆರಳುವ ರಸ್ತೆ ಹಾಗೂ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳ ಪರಿಶೀಲನೆ ನಡೆಸಿದರು. ಕೋಳಿ ಫಾಮ್ರ್, ಬನ್ನೇರುಟ್ಟ ಹಾಗೂ ಜಿಗಣಿಯಲ್ಲಿ ಕಾರಿನಿಂದ ಇಳಿದು ಕೆಲವೇ ಕ್ಷಣ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬೊಮ್ಮಸಂದ್ರ ದಿಂದ ಚಂದಾಪುರ ಮಾರ್ಗವಾಗಿ ಮುತ್ತಾನಲ್ಲೂರಿನ ಬಳಿಯ ಖಾಸಗಿ ಬಡಾವಣೆಯಲ್ಲಿರುವ ಶಿವಣ್ಣ ನಿವಾಸಕ್ಕೆ ತೆರಳಿದ ಡಿ.ಕೆ.ಶಿ, ಅಲ್ಲಿಂದ ವಾಪಸ್ ತೆರಳಿದರು.
ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮನವಿ : ಬೆಂಗಳೂರು ದಣ ವಿಧಾನಸಭಾ ಕ್ಷೇತ್ರದ ಬನ್ನೇರುಟ್ಟ, ಮಂಟಪ, ಜಿಗಣಿ ಕೈಗಾರಿಕಾ ಪ್ರದೇಶ, ಹಾರಗದ್ದೆ, ಕೋನಪ್ಪನ ಅಗ್ರಹಾರ, ಹುಲಿಮಂಗಲ, ದೊಡ್ಡ ತೋಗೂರು ವ್ಯಾಪ್ತಿಯನ್ನು ಬೆಂಗಳೂರು ನಗರಕ್ಕೆ ಸೇರಿಸಲು ಮನವಿ ಮಾಡಲಾಗಿದೆ.ಜಿಗಣಿಯಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಡಬಲ್ ರೋಡ್ ಹಾಳಾಗಿರುವುದು ಸೇರಿ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಡಿಸಿಎಂ ಮನವಿ ಮಾಡಿದ್ದೇನೆ ಎಂದು ಬೆಂಗಳೂರು ದಣ ಶಾಸಕ ಎಂ. ಕೃಷ್ಣಪ್ಪ "ವಿಜಯವಾಣಿ'ಗೆ ತಿಳಿಸಿದ್ದಾರೆ.
ಡಿಸಿಎಂಗೆ ಹೊಂಡಗಳಬಿಸಿ : ಜಿಗಣಿಯಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ರಸ್ತೆ ಹಾಗೂ ಚಂದಾಪುರದಿಂದ ಮುತ್ತಾನಲ್ಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹೊಂಡ ಗುಂಡಿಗಳೇ ಸೃಷ್ಟಿಯಾಗಿದ್ದು, ಡಿ.ಕೆ. ಶಿವಕುಮಾರ್ ಇದೇ ರಸ್ತೆಯಲ್ಲಿ ಪ್ರಯಾಣ ಬೆಳೆಸಬೇಕಾಯಿತು. ಈ ವೇಳೆ ಉಪಮುಖ್ಯಮಂತ್ರಿ ಅವರಿಗೆ ಹೊಂಡ &ಗುಂಡಿಗಳ ದರ್ಶನವಾಯಿತು.