

ನರೇಗಲ್ಲ: ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವವು ನ. 16 ರಿಂದ 25ರವರೆಗೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಶ್ರೀಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾಹಿತಿ ನೀಡಿದರು. ನ. 16ರಿಂದ ಹತ್ತು ದಿನ ಹಾನಗಲ್ಲ ಗುರು ಕುಮಾರೇಶ್ವರರ ಪುರಾಣ ನಡೆಯಲಿದೆ. ಇಲಕಲ್ಲ ಅನ್ನದಾನ ಶಾಸ್ತ್ರಿಗಳು ಪುರಾಣ ನಡೆಸಿಕೊಡಲಿದ್ದಾರೆ. ನ. 25ರಂದು ಬೆಳಗ್ಗೆ 10ಕ್ಕೆ ಧಾರ್ಮಿಕ ಗ್ರಂಥಗಳ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.
ನ. 24 ರಂದು ರೋಣ ಶಾಸಕ ಜಿ. ಎಸ್. ಪಾಟೀಲರ ಸುವರ್ಣ ದಾಂಪತ್ಯದ ಅಂಗವಾಗಿ ದಾನಿಗಳಿಗೆ ಸನ್ಮಾನ, ಸಾಧಕರಿಗೆ ಗೌರವಾರ್ಪಣೆ, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಏರ್ಪಡಿಸಲಾಗಿದೆ ಎಂದರು.
ಪಾದಯಾತ್ರೆ
ಈ ವರ್ಷದ ಜಾತ್ರೆಯ ವಿಶೇಷತೆ ಎಂದರೆ ಧರ್ಮ ಜಾಗೃತಿಗಾಗಿ ನ. 16ರಿಂದ ಪ್ರತಿ ದಿನ ಬೆಳಗ್ಗೆ ಪಟ್ಟಣದಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
ವರ್ತಕ ಎಂ. ಎಂ. ಪಲ್ಲೇದ, ನಿವೃತ್ತ ಶಿಕ್ಷಕ ಎಂ. ಎಸ್. ದಢೇಸೂರಮಠ, ಡಾ. ಕೆ. ಬಿ. ಧನ್ನೂರ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ರುದ್ರಮುನಿ ಹಿರೇಮಠ, ನಿಂಗಪ್ಪ ಕಣವಿ, ಶಿವನಗೌಡ ಪಾಟೀಲ, ರಮೇಶ ಕಳಕೊಣ್ಣವರ, ಶರಣಪ್ಪ ಜುಟ್ಲ, ಬಸವರಾಜ ಕಳಕೊಣ್ಣವರ, ಇತರರಿದ್ದರು.