ನ.1ರಿಂದ ಮೂಡಲಗಿ ಪ್ರೀಮಿಯರ್ ಲೀಗ್

30..10
ಮೂಡಲಗಿ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಪ್ರಚಾರ ಪತ್ರಿಕೆಯನ್ನು ಸಂಘಟಕರು ಬಿಡುಗಡೆಗೊಳಿಸಿದರು. ಬಾಲಶೇಖರ ಬಂದಿ, ಈರಣ್ಣ ಕೊಣ್ಣೂರ, ಶಿವಾನಂದ ಗಾಡವಿ, ಸಂಜಯ ಮೋಕಾಶಿ ಇತರರು ಇದ್ದರು.
Published on

ಮೂಡಲಗಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಸಂಯುಕ್ತ ಆಶ್ರಯದಲ್ಲಿ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ನ.1 ರಿಂದ 5ರ ವರೆಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಪಂದ್ಯಾವಳಿ ಜರುಗಲಿವೆ ಎಂದು ಮೂಡಲಗಿ ಲಯನ್ಸ್ ಕ್ಲಬ್ ಸದಸ್ಯ ಬಾಲಶೇಖರ ಬಂದಿ ಹೇಳಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಸದಸ್ಯ ಈರಣ್ಣ ಕೊಣ್ಣೂರ, ಶಿವಾನಂದ ಗಾಡವಿ, ಸಂಜಯ ಮೋಕಾಶಿ, ಪುಲಕೇಶ ಸೋನವಾಲಕರ, ಮಲ್ಲಪ್ಪ ಕುರುಬಗಟ್ಟಿ, ಪ್ರವೀಣ ಕುರಬಗಟ್ಟಿ, ಗಿರೀಶ ಮೇತ್ರಿ, ಪ್ರಶಾಂತ ನಿಡಗುಂದಿ, ರವಿ ಪತ್ತಾರ, ಸುರೇಶ ಸಣ್ಣಕ್ಕಿ, ಮಹಮ್ಮದ್ ತುಂಬಗಿ, ಬಂಧು ತುಂಬಗಿ, ಸೋಮು ಮಠಪತಿ, ಶೇಖರಯ್ಯ ಹಿರೇಮಠ, ವಿನೋದ ಹೊಸಮನಿ, ಲಕ್ಕಪ್ಪ ತಳವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net