ಸಂಡೂರು: ತಾಲೂಕಿನ ಎನ್‌ಎಂಡಿಸಿ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಿದ ಸ್ಪರ್ಧಾರ್ಥಿಗಳಿಗೆ ತರಬೇತಿಯನ್ನು ಜು.7ರಿಂದ 3ದಿನಗಳ ಕಾಲ ಬೆ.10ರಿಂದ ಸಂಜೆ 4.30ರವರೆಗೆ ಎನ್‌ಎಂಡಿಸಿ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದೆ. ಅಭ್ಯರ್ಥಿಗಳು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದ್ದಾರೆ.