ಪುರಾಣ ಪ್ರವಚನಗಳಿಂದ ಅಜ್ಞಾನ ದೂರ

swamy
ಎಮ್ಮಿನಗೂರಿನ ಹಂಪಿ ಸಾವಿರ ದೇವರ ಮಠದಲ್ಲಿ ಶ್ರೀಮದ್ ರಂಭಾಪುರಿ ಗಂಗಾಧರ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಉದ್ಘಾಟಿಸಿದರು. ಶಾಸಕ ಜೆ.ಎನ್.ಗಣೇಶ್, ಮಠಾಧೀಶರಾದ ವಿಶ್ವಾರಾಧ್ಯ ಶಿವಾಚಾರ್ಯರು, ಡಾ.ಕರಿಬಸವರಾಜೇಂದ್ರ ಶ್ರೀಗಳು, ವಾಮದೇವ ಶಿವಾಚಾರ್ಯರು, ಪ್ರಭು ಶ್ರೀಗಳು ಇತರರಿದ್ದರು..
Published on

ಕಂಪ್ಲಿ: ಪುರಾಣ ಪ್ರವಚನಗಳು ಮನುಷ್ಯನ ಅಜ್ಞಾನವನ್ನು ಕಳೆಯುತ್ತವೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

ಎಮ್ಮಿಗನೂರಿನ ಹಂಪಿಸಾವಿರದೇವರ ಮಠದಲ್ಲಿ ಶ್ರೀಗುರುಸಿದ್ಧಲಿಂಗ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯರ 22ನೇ ಪುಣ್ಯಸ್ಮರಣೆ ನಿಮಿತ್ತ ಏರ್ಪಡಿಸಿರುವ ಶ್ರೀಮದ್ ರಂಭಾಪುರಿ ಗಂಗಾಧರ ಜಗದ್ಗುರುಗಳ ಪುರಾಣಪ್ರವಚನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಸಾನ್ನಿಧ್ಯವಹಿಸಿ ಮಾತನಾಡಿದರು.

ಪುರಾಣ ಪ್ರವಚನಗಳಿಂದ ವಿಮುಖರಾಗದೆ, ಅದರೊಳಗಿನ ತತ್ವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಹಂಪಿ ಸಾವಿರ ದೇವರಮಠದ ವಾಮದೇವ ಶಿವಾಚಾರ್ಯರು ಮಾತನಾಡಿ, ದೇವರಲ್ಲಿ ಬೇಡುವುದಾದರೆ ಜ್ಞಾನ ಬೇಡಬೇಕು.

ದೇವರಿಗಿಂತ ಆತನ ನಾಮಸ್ಮರಣೆ ಮಿಗಿಲಾಗಿದ್ದರಿಂದ ಪುರಾಣ ಪ್ರವಚನಗಳು ದೇವರ ಚಿಂತನೆಯನ್ನು ಮೂಡಿಸಿ ಲೌಕಿಕ ಯೋಚನೆಗಳಿಂದ ದೂರಮಾಡುತ್ತದೆ ಎಂದರು.

ಮಾದನಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯರು ಪುರಾಣ ಪ್ರವಚನ ನೀಡಿದರು. ನಂ.10ಮುದ್ದಾಪುರದ ಶರಣಯ್ಯಸ್ವಾಮಿ ಹಿರೇಮಠ ಸಂಗೀತ, ಗದುಗಿನ ಚಂದ್ರಯ್ಯಸ್ವಾಮಿ ಹಿರೇಮಠ ತಬಲಾ ಸಾಥ್ ನೀಡಿದರು.


ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಉರುವಕೊಂಡದ ಡಾ.ಕರಿಬಸವರಾಜೇಂದ್ರ ಸ್ವಾಮೀಜಿ, ಶಾಸಕ ಜೆ.ಎನ್.ಗಣೇಶ್, ಪಾಲ್ತೂರಿನ ಚನ್ನವೀರ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಪ್ರಭು ಸ್ವಾಮೀಜಿ, ಪ್ರಮುಖರಾದ ಬಿ.ಸದಾಶಿವಪ್ಪ, ಎಚ್.ಮಹಾರುದ್ರಗೌಡ, ಕವಿತಾಳ್ ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net