ಮಠಗಳಿಂದ ಸಾಮಾಜಿಕ ಜಾಗೃತಿ

5Inapur1
Published on

ಐನಾಪುರ: ಮಠ-ಮಂದಿರಗಳು ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುತ್ತಿವೆ ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀಧರಿದೇವರು ಹಾಗೂ ಶ್ರೀ ಜಕ್ಕಮ್ಮದೇವಿ ದೇವಸ್ಥಾನದಲ್ಲಿ ಸೇವಾ ಸಮಿತಿ ಈಚೆಗೆ ಹಮ್ಮಿಕೊಂಡಿದ್ದ 6ನೇ ವರ್ಷದ ಕಾರ್ತಿಕೋತ್ಸವದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಪಂ ಸದಸ್ಯ ತಮ್ಮಣ್ಣ ಪಾರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಿಗಳನ್ನು ಸನ್ಮಾನಿಸಲಾಯಿತು. ಸುಕ್ರುಸಾಬ ಮುಲ್ಲಾ, ಗುರುನಾಥ ಸುತಾರ ಗವಾಯಿಗಳು ಸಂಗೀತ ಸೇವೆ ನೀಡಿದರು.

ಗ್ರಾಪಂ ಸದಸ್ಯ ಸುಭಾಷ ಪಾಟೀಲ, ಚಮನರಾವ್ ಪಾಟೀಲ, ಸುರೇಶ ಗಾಣಿಗೇರ, ಪಪಂ ಸದಸ್ಯ ಸಂಜು ಭಿರಡಿ, ರಾಕೇಶ ಕಾರ್ಚಿ, ಕೆಆರ್‌ಇಎಸ್ ಸಂಸ್ಥೆ ನಿರ್ದೇಶಕ ಉದಯ ನಿಡಗುಂದಿ, ವಿಜಯ ಪೋತದಾರ, ಅಣ್ಣಾಸಾಹೇಬ ಡೂಗನವರ, ರಾವಸಾಹೇಬ ಚೌಗಲಾ, ಬಾಳಾಸಾಹೇಬ ಪಾರಶೆಟಿ,್ಟ ಶ್ರೀಶೈಲ ಪಾರಶೆಟ್ಟಿ, ಅಶೋಕ ಡಿಗ್ರಜ, ಪ್ರವೀಣ ಖೋತ, ವಿಶ್ವನಾಥ ಪಾರಶೆಟ್ಟಿ, ತಮಣ್ಣ ಕಮತೆ, ರಾವಸಾಹೇಬ ಪಾಟೀಲ, ಪ್ರಕಾಶ ಬಡಿಗೇರ ಇತರರಿದ್ದರು. ಮಹೇಶ ಸೊಲ್ಲಾಪುರ ನಿರೂಪಿಸಿದರು. ಸಂಗೀತಾ ಮಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net