

ಮೈಸೂರು: ಹಿಂದೆಂದೂ ಕಂಡರಿಯದ ಬಿಸಿಲಿನ ತಾಪದಿಂದ ಬಸವಳಿದ ಜನರ ದಾಹ ತಣಿಸಲು ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಶುದ್ಧ ಆರೋಗ್ಯಕರ ರಾಗಿ ಅಂಬಲಿ, ರೋಗ ನಿವಾರಕ ಮಜ್ಜಿಗೆ ಹಾಗೂ ಮೊಸರನ್ನು ಮಾರುಕಟ್ಟೆಗೆ ನೀಡಿದೆ.
ಹೌದು ಬರೋಬ್ಬರಿ ಮೈಸೂರಿನ ಬನ್ನೂರು ಮುಖ್ಯರಸ್ತೆಯಲ್ಲಿರುವ ಮೈಸೂರು ಹಾಲು ಉತ್ಪಾದಕರ ಒಕ್ಕೂಟವು (ಮೈಮುಲ್) ಈಗಾಗಲೇ ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ, ಬರ್ಫಿ, ಮೈಸೂರು ಪಾಕ್, ಪನ್ನೀರ್, ಗೋಧಿ ಲಡ್ಡು ಸೇರಿ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಈಗಾಗಲೇ ಗ್ರಾಹಕರಿಗೆ ನೀಡಿವೆ. ಇದೇ ಮೊದಲ ಬಾರಿಗೆ ರೈತರು ಹಾಗೂ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 163ನೇ ಉತ್ಪನ್ನವಾಗಿ ರಾಗಿ ಅಂಬಲಿ, ಶಕ್ತಿವರ್ಧಕ ಮಜ್ಜಿಗೆ ಹಾಗೂ ಪ್ರೊಬಯೋಟಿಕ್ಸ್ ಮೊಸರನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.