ಮಹಾಪೂಜೆಯಿಂದ ಮಾನವಕುಲಕ್ಕೆ ಒಳಿತು

21mamadapur1
Published on

ಮಮದಾಪುರ: ಬಿಳಿ ಸಮವಸ್ತ್ರ ಶಾಂತಿ ಸಂಕೇತವಾಗಿದ್ದು, ಪವಿತ್ರ ಶ್ರಾವಣ ಮಾಸದಲ್ಲಿ ಅಂಕಲಗಿ ಅಡವಿ ಸಿದ್ಧೇಶ್ವರ ಶರಣರು ಕೈಗೊಂಡ ಮಹಾಪೂಜೆಯಿಂದ ಮನುಕುಲಕ್ಕೆ ಒಳಿತಾಗುತ್ತದೆ ಎಂದು ತವಗ ಅಜ್ಜಯ್ಯನವರು ಹೇಳಿದರು. ಸಮೀಪದ ಕೊಳವಿ ಗ್ರಾಮದ ಶ್ರೀ ಗೂಳಿ ಬಸವೇಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಡಿವಿಸಿದ್ದೇಶ್ವರ ಶರಣರ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಳಿಕಟ್ಟಿ ವಿರಕ್ತಮಠದ ನಿರಂಜನ ಶಿವಮೂರ್ತಿ ಸ್ವಾಮೀಜಿ, ಬಸಯ್ಯ ಹುಲಕಂತಿ ಸ್ವಾಮೀಜಿ, ಸಂಗಯ್ಯ ಹುಲಕಂತಿ ಸ್ವಾಮೀಜಿ, ಪತ್ರಯ್ಯ ಸ್ವಾಮೀಜಿ, ಗುರು ಶರಣರಾದ ಕಾಶಿನಾಥ ಗೋಕಾಕ, ಯಲ್ಲಪ್ಪ ಹಿರಟ್ಟಿ, ಶ್ರೀಕಾಂತ ಮುಂಗರವಾಡಿ, ಬಸನಗೌಡ ಹಟ್ಟಿಗೌಡರ, ಮಂಜುನಾಥ ಕಂಬಾರ, ಬಸವರಾಜ ಕರೆನ್ನವರ, ಬಾಳೇಶ ವನಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net