

ಮಾನ್ವಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜೂ.25ರಿಂದ ಜು.1ರವರೆಗೆ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದಿಂದ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಬಿದರೆ ಗ್ರಾಮದ ವಿನಯರಾಮ ಅವರ ಅರಮನೆ ಶೈಲಿಯ ಅಯೋಧ್ಯೆ ಶ್ರೀ ರಾಮ ಮಂದಿರ ಮಾದರಿ ಪ್ರದರ್ಶನವು ಪ್ರತಿದಿನ ಸಂಜೆ 6 ರಿಂದ 9 ಗಂಟೆವರೆಗೆ ನಡೆಯಲಿದ್ದು, ಮಾನ್ವಿ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಶ್ರೀ ಕನ್ಯಕಾ ಭಜನಾ ಮಂಡಳಿ ಹಾಗೂ ಶ್ರೀ ವಾಸವಾಂಬ ಭಜನಾ ಮಂಡಳಿ, ವಾಸವಿ ಪುರುಷರ ಭಜನಾ ಮಂಡಳಿ ತಂಡದಿಂದ ಪ್ರತಿದಿನ ಸಂಜೆ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಲಿದೆ. ತಾಲೂಕಿನ ಭಕ್ತರು ದರ್ಶನ ಪಡೆಯಬೇಕೆಂದು ಸಂಘದ ತಾಲೂಕು ಅಧ್ಯಕ್ಷ ಆರ್.ಮುತ್ತುರಾಜ್ ಶೆಟ್ಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.