

ತಲ್ಲೂರ: ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರಾಜ್ಯದ ಧಾರ್ಮಿಕ ೇತ್ರಗಳ ಜೀಣೋರ್ದ್ಧಾರಕ್ಕೆ ಸಹಾಯ ಮಾಡುತ್ತಿದ್ದಾರೆ. ಸ್ವಸಹಾಯ ಸಂಗಳ ರಚನೆಯಿಂದ ಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಲವಕುಮಾರ ಹೇಳಿದರು.
ಸಮೀಪದ ಸೋಮಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ ಸಿದ್ಧಾರೂಢ ಮಠಕ್ಕೆ ಜೀಣೋರ್ದ್ಧಾರಕ್ಕಾಗಿ 3 ಲ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಜಯದೇವ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ನಾಡಿನ ಜನರ ನೋವು ದೂರ ಮಾಡುವ ಧಾರ್ಮಿಕ ೇತ್ರ ಎಂದರು. ಜಿಲ್ಲಾ ನಿರ್ದೇಶಕ ಲವಕುಮಾರ, ಯೋಜನಾಧಿಕಾರಿ ಶ್ರೀಕಾಂತ, ವಲಯ ಮೇಲ್ವಿಚಾರಕ ನಾಗರಾಜ ಡಿ. ಅವರನ್ನು ಸನ್ಮಾನಿಸಲಾಯಿತು. ವಲಯ ಮೇಲ್ವಿಚಾರಕ ನಾಗರಾಜ ನಾಯ್ಕ, ಆರ್.ಬಿ.ಅಣ್ಣಿಗೇರಿ, ಪ್ರಕಾಶ ನಾಯ್ಕರ, ಅರುಣ ಗೊರಾಬಾಳ, ಮಹಾದೇವ ಜಮನಾಳ, ದೇಮಪ್ಪ ದೇಸಾಯಿ, ಸಿದ್ಧಾರೂಢ ಗೊಟಿ, ದೇಮಪ್ಪ ಬುಶನ್ನವರ, ಮರಮೇಶ ನಾಯ್ಕರ, ಪಿ.ಎಸ್.ನಾಯ್ಕರ, ಸಾಗರ ದೊಡಮನಿ, ಸುರೇಶ ನಾಯ್ಕರ, ಸಿದ್ದಪ್ಪ ಗೊರಬಾಳ ಇತರರಿದ್ದರು.