ಸಿರಿಧಾನ್ಯದಿಂದ ಮಣ್ಣಿನ ಫಲವತ್ತತೆ ಹೆಚ್ಚಳ

13 HRP 02
ಬೂದಿಹಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಕೃಷಿ ವಿಸ್ತರಣ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಬೇಸಾಯದ ಕುರಿತ ವಿಶೇಷ ಉಪನ್ಯಾಸ ಸಮಾರಂಭ ನಡೆಯಿತು. ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ, ಕೃಷಿ ಮೇಲ್ವಿಚಾರಕ ಬಸವರಾಜ ಆರ್.ಎಚ್, ರೈತ ಸಂಘದ ಮುಂಖಂಡ ಕೆ.ಎನ್.ಸಿದ್ದೇಶ್ ಇತರರಿದ್ದರು.
Published on

ಹರಪನಹಳ್ಳಿ:ಸಿರಿಧಾನ್ಯ ಬಡವರ ಧಾನ್ಯವಾಗಿತ್ತು. ಇಂದು ಶ್ರೀಮಂತರ ಆರೋಗ್ಯದ ಧಾನ್ಯವಾಗಿ ಮಾರ್ಪಟ್ಟಿದೆೆ ಎಂದು ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ ಹೇಳಿದರು.

ತಾಲೂಕಿನ ಅರಸೀಕೆರೆ ವಲಯದ ಬೂದಿಹಾಳ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಆಯೋಜಿಸಿದ್ದ ಕೃಷಿ ವಿಸ್ತರಣ ಕಾರ್ಯಕ್ರಮದಡಿ ಸಿರಿಧಾನ್ಯ ಬೇಸಾಯದ ಕುರಿತ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು.

ಸಿರಿಧಾನ್ಯ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕಡಿಮೆ ಗೊಬ್ಬರ ಬಳಕೆಯಿಂದ ರೈತರಿಗೆ ಲಾಭವಾಗುವುದೇ ಹೊರತು ನಷ್ಟವಾಗುವುದಿಲ್ಲ. ಸಿರಿಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಸಾಮೆ, ಅರ್ಕ, ಊದಲು, ಕೊರಲೆ ಮತ್ತು ಬರಗು ಇವುಗಳ ಅಲ್ಪಾವಧಿ ಮತ್ತು ಮಳೆಯಾಶ್ರಿತ ಬೆಳೆಗಳಾಗಿವೆ ಎಂದರು.

ಕೃಷಿ ಮೇಲ್ವಿಚಾರಕ ಬಸವರಾಜ ಆರ್.ಎಚ್ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸಬೇಕು. ಗುಣಮಟ್ಟದ ಬೀಜಗಳ ಆಯ್ಕೆ ಮಾಡಿ, ಬೆಳೆಗಳ ನಿರ್ವಹಣೆಯಲ್ಲಿ ಕಳೆಗಳ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೇಂದ್ರಕರಿಸಬೇಕು. ಸಿರಿಧಾನ್ಯಗಳಲ್ಲಿ ಅತಿ ಹೆಚ್ಚಾಗಿ ಪ್ರೋಟಿನ್, ಕ್ಯಾಲ್ಸಿಯಂ, ನಾರಿನಂಶ ಮತ್ತು ಕಬ್ಬಿಣಾಂಶ ಇರುವುದರಿಂದ ನಮ್ಮ ದೇಹಕ್ಕೆ ಬೇಕಾದ ಸೂಕ್ತ ಆಹಾರ ಒದಗಿಸುತ್ತದೆ ಎಂದರು. ರೈತ ಸಂಘದ ಮುಂಖಂಡ ಕೆ.ಎನ್.ಸಿದ್ದೇಶ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net