

ಅಥಣಿ ಗ್ರಾಮೀಣ: ಮನೋದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ, ಆದ್ದರಿಂದ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಕಾಶೀಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಆಟೋಟಗಳಲ್ಲಿ ಭಾಗವಹಿಸುವುದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದರು.
ಮುಖಂಡ ಚಿದಾನಂದ ಸವದಿ ಮಾತನಾಡಿ, ಸಪ್ತಸಾಗರ ಗ್ರಾಮ ನಿರಂತರ ಕ್ರೀಡೆಗಳನ್ನು ಹಮ್ಮಿಕೊಂಡು ಏರ್ಪಡಿಸುವ ಮೂಲಕ ಅಥಣಿ ತಾಲೂಕಿನಲ್ಲಿ ಹೆಸರಾಗಿದೆ. ಜಾತ್ರೆ ನೆಪದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆ ಎಂದು ತಿಳಿಸಿದರು.
ಕ್ರಿಷ್ಣಾ ಕಿತ್ತೂರಿನ ಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಬಸವರಾಜ ಹಣಗಂಡಿ, ಪ್ರಕಾಶ ಜ್ಯೋಶಿ, ವಿವೇಕ ನಾರಗೊಂಡ, ಚಂದ್ರಕಾಂತ ಪರೀಟ, ಡಾ.ಅಪ್ಪಾಸಾಹೇಬ ನಾಡಗೌಡ, ಆರ್.ಎ.ಪಾಟೀಲ, ಡಾ.ಪದ್ಮಜೀತ ನಾಡಗೌಡ, ನಾರಾಯಣ ಘೋರ್ಪಡೆ, ಸಂಜಯ ನಾಡಗೌಡ, ಪರಮಾನಂದ ತೇಲಿ, ಚಂದ್ರಕಾಂತ ಸಂಕ್ರಟ್ಟಿ ಇತರರು ಇದ್ದರು.