ಫೆ.1ರಿಂದ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಪಾಲಿಕೆ ಚಾಲನೆ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಸ್ವರೂಪದ ಅಂಗಡಿ, ಮಳಿಗೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು ತಮ್ಮ ಪರವಾನಿಗೆ ನವೀಕರಿಸಲು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸುವ ವ್ಯವಸ್ಥೆಗೆ ಪಾಲಿಕೆಯು ಚಾಲನೆ ನೀಡಿದೆ.

ಈಗಾಗಲೇ ಪರವಾನಿಗೆಯೊಂದಿಗೆ ವ್ಯಾಪಾರ ನಡೆಸುತ್ತಿರುವವರು ಮುಂದಿನ ದಿನಗಳಲ್ಲಿ ತಮಗೆ ಸರಿಹೊಂದುವ ಅವಧಿಗೆ ಉದ್ದಿಮೆ ಪರವಾನಿಗೆ ನವೀಕರಿಸಿಕೊಳ್ಳಬಹುದಾಗಿದೆ. ಉದ್ದಿಮೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ವರ್ಷದಿಂದ 5 ವರ್ಷದ ಅವಧಿಗೆ (ಏಪ್ರಿಲ್‌ನಿಂದ ಮಾರ್ಚ್ ತಿಂಗಳವರೆಗೆ) ನವೀಕರಣ ಮಾಡಿಕೊಳ್ಳಬಹುದಾಗಿದೆ.

ಹಿಂದಿನ ವರ್ಷದಂತೆ ಈ ಬಾರಿಯೂ ಶುಲ್ಕವನ್ನು ಆನ್‌ಲೈನ್ ( ಡಿಡಿಡಿ.ಚಿಚಿಞ.ಜಟ.ಜ್ಞಿ) ಮೂಲಕ ಹಾಗೂ ಬ್ಯಾಂಕ್ ಚಲನ್ ನೊಂದಿಗೆ ಕೆನರಾ ಬ್ಯಾಂಕಿನಲ್ಲಿ ಪಾವತಿಸಬಹುದಾಗಿದೆ. ಆಯಾ ವರ್ಷಕ್ಕೆ ನಿಗದಿಯಾಗಿರುವ ಮೊತ್ತವನ್ನು ಗಮನಿಸಿ ೆ.1ರಿಂದ 29ರ ವರೆಗೆ ದಂಡವಿಲ್ಲದೆ ಪರವಾನಿಗೆ ಶುಲ್ಕ ಪಾವತಿಸಬಹುದಾಗಿದೆ. ಮಾ.1ರಿಂದ 31ರ ವರೆಗೆ ನವೀಕರಣ ಶುಲ್ಕದ ಶೇ.25 ದಂಡದ ಮೊತ್ತದೊಂದಿಗೆ ಪಾವತಿಸಲು ಅವಕಾಶ ಇರಲಿದೆ. ಆದರೆ, ಏ.1ರಿಂದ ಶುಲ್ಕದ ಶೇ.100 ದಂಡ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಾರಿಗಳ ಮನವೋಲಿಕೆಗೆ ಕ್ರಮ:

ನಗರದಲ್ಲಿ ಅಂದಾಜು 6-7 ಲಕ್ಷ ಸಂಖ್ಯೆಯಷ್ಟು ವಿವಿಧ ಬಗೆಯ ಅಂಗಡಿ, ಮಳಿಗೆಗಳು ಇವೆ. ಇವುಗಳಲ್ಲಿ ಒಂದು ಲಕ್ಷ ಪೆಟ್ಟಿ ಅಂಗಡಿ ಮಾದರಿಯ ಕಿರು ಮಳಿಗೆಗಳಾಗಿವೆ. ಉಳಿದ ಮಳಿಗೆಗಳು ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯ ಇದ್ದರೂ, ನಾನಾ ನೆಪವೊಡ್ಡಿ ನವೀಕರಣ ಮಾಡಿಕೊಳ್ಳುತ್ತಿಲ್ಲ. ಇದರಿಂದ ಪಾಲಿಕೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ. ಪರವಾನಿಗೆ ವಿತರಣೆ ಹಾಗೂ ನವೀಕರಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದಿರುವ ಕಾರಣ ಈ ಬಾರಿ ಎಲ್ಲ ವ್ಯಾಪಾರಿಗಳನ್ನು ಸಂಪರ್ಕಿಸಿ ಪರವಾನಿಗೆ ಪಡೆದುಕೊಳ್ಳುವಂತೆ ಮನವೋಲಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net