ಜಾತ್ರೆಯಿಂದ ಕೋಮು ಸೌಹಾರ್ದ ವೃದ್ಧಿ

1
ಬೆಲ್ಲದ ಬಾಗೇವಾಡಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಉದ್ಯಮಿ ಪೃಥ್ವಿ ಕತ್ತಿ ದೇವಿ ದರ್ಶನಾಶೀರ್ವಾದ ಪಡೆದರು. ಅಶೋಕ ಪಾಟೀಲ, ಅಪ್ಪಾಸಾಹೇಬ ಖೇಮಲಾಪುರೆ, ದಿಲೀಪ ವಾಳಿಖಿಂಡಿ ಇತರರಿದ್ದರು.
Published on

ಹುಕ್ಕೇರಿ: ಕೋಮು ಸೌಹಾರ್ದ ಹೆಚ್ಚಳಕ್ಕೆ ಜಾತ್ರಾ ಮಹೋತ್ಸವ ಸಹಕಾರಿ ಆಗುತ್ತವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ದೇವಿ ಆಶೀರ್ವಾದ ಪಡೆದು ಮಾತನಾಡಿ, ಅಹಿತಕರ ಘಟನೆ ಸಂಭವಿಸದಂತೆ 18 ಲಕ್ಷ ರೂ. ವೆಚ್ಚದಲ್ಲಿ 22 ಅಡಿ ಎತ್ತರದ ಸಾಗವಾನಿ ಕಟ್ಟಿಗೆ ರಥ ಸಿದ್ಧಪಡಿಸಿದ್ದು, ಅದರಲ್ಲಿ ದೇವಿ ಕೂಡ್ರಿಸಿ ಜಾತ್ರೆ ಆಚರಿಸುತ್ತಿದ್ದೇವೆ ಎಂದರು.

ಶಾಸಕ ನಿಖಿಲ ಕತ್ತಿ, ಉದ್ಯಮಿ ಪೃಥ್ವಿ ಕತ್ತಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಅವರು ಕುಟುಂಬ ಸಮೇತ ಆಗಮಿಸಿ ದೇವಿ ಆಶೀರ್ವಾದ ಪಡೆದರು. ಅಶೋಕ ಪಾಟೀಲ, ಅಪ್ಪಾಸಾಹೇಬ ಖೇಮಲಾಪುರೆ, ದಿಲೀಪ ವಾಳಿಖಿಂಡಿ, ಸುಧೀರ ಕತ್ತಿ, ಮುರಗೇಶ ಮಾಳಗಿ, ಮಹಾನಿಂಗ ಶೆಟ್ಟಿ, ಮಲ್ಲು ಬಾನಿ, ದೀಪಕ ಮುರಗಾಲಿ, ಲಕ್ಷ್ಮಣ ರಾಮದುರ್ಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net