ಮಾದಕ ವಸ್ತುಗಳ ಸೇವನೆಯಿಂದ ಜೀವನ ನಾಶ

26kst-1
ಕುಷ್ಟಗಿಯ ಪಾಲಿಟೆಕ್ನಿಕ್‌ನಲ್ಲಿ ಏರ್ಪಡಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಜೆಎಂಎಫ್‌ಸಿ ಕೋರ್ಟ್‌ನ ಹಿರಿಯ ಸಿವಿಲ್ ನ್ಯಾಯಾಶೀಶೆ ಒ.ಸರಸ್ವತಿ ದೇವಿ ಉದ್ಘಾಟಿಸಿದರು. ಪ್ರಾಚಾರ್ಯ ಬಿ.ಆರ್.ರಾಜಶೇಖರ್, ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಕುಷ್ಟಗಿ ಇದ್ದರು.
Published on

ಕುಷ್ಟಗಿ: ಮಾದಕ ವಸ್ತುಗಳ ಸೇವನೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದು ಜೆಎಂಎಫ್‌ಸಿ ಕೋರ್ಟ್ ನ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.

ಕಾನೂನು ಸೆವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸದೃಢ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ತರವಾದದ್ದು. ಅದರೆ, ಮಾದಕ ವಸ್ತುಗಳ ಸೇವನೆ, ಜೂಜು ಇನ್ನಿತರ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದರೆ. ದುಶ್ಚಟಗಳ ದುಷ್ಪರಿಣಾಮ ಅರಿವಿದ್ದರೂ ಬಹುತೇಕರು ದಾರಿ ತಪ್ಪುತ್ತಿದ್ದಾರೆ. ಸರಿದಾರಿಗೆ ತರುವ ಕಾರ್ಯವಾಗಬೇಕಿದೆ ಎಂದರು.

ಖಾದರಬಾಷಾ ಮಾಗಿ, ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಬಿ.ಆರ್.ರಾಜಶೇಖರ್, ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಕುಷ್ಟಗಿ, ಕಾರ್ಯದರ್ಶಿ ಬಸವರಾಜ ಲಿಂಗಸಗೂರು, ಜಂಟಿ ಕಾರ್ಯದರ್ಶಿ ಮೈನುದ್ದೀನ್, ಉಪನ್ಯಾಸಕರಾದ ವಾದಿರಾಜ ಮಠದ್, ಸಿ.ಎಸ್.ಜನಾದ್ರಿ, ಹನುಮಂತ, ಡಾ.ಸೌಮ್ಯ, ಭೋಗೇಶರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net