

ನಂದೇಶ್ವರ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿದು ಆರೋಗ್ಯ ಸಂಪತ್ತು ಕಾಪಾಡಿಕೊಳ್ಳಬೇಕು ಎಂದು ವಿದ್ಯಾವರ್ಧಕ ಸಮಿತಿ ಉಪಾಧ್ಯಕ್ಷ ಡಾ.ಶ್ರೀವತ್ಸ ಕುಲಕರ್ಣಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಜಿಎನ್‌ಕೆ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ಶ್ರೀಶೈಲ ಜಗದೇವ ಮಾತನಾಡಿ, ಮನುಷ್ಯ ಮನುಷ್ಯನಂತೆ ಬದುಕಬೇಕೇ ಹೊರತು ಪ್ರಾಣಿಗಳಂತೆ ಬದುಕಬಾರದು ಎಂದರು. ಅರುಂದತಿ ಕುಲಕರ್ಣಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ರೇಖಾ ನರಗುಂದ, ಮುಖ್ಯ ಶಿಕ್ಷಕ ಎಚ್. ಮಹಾಂತೇಶ, ಆನಂದ ಕುಲಕರ್ಣಿ, ಐ.ಎಂ. ದೊಡಮನಿ, ಶಿರೀಶ ಕುಲಕರ್ಣಿ, ರವಿ ಬಸಗೌಡರ, ಬೇಬಿ ಪಾಟೀಲ, ರಯಿಸಾ ಖಾಜಿ ಇತರರಿದ್ದರು.