

ಕಟಕೋಳ: ಧರ್ಮಸ್ಥಳ ಟ್ರಸ್ಟ್ ಕೈಗೊಳ್ಳುವ ಯೋಜನೆಗಳಿಂದ ಸಮಾಜದ ಜನರ ಶೆಣಿಕ, ಆರ್ಥಿಕ, ಸಾಮಾಜಿಕ ಅಭಿವದ್ಧಿಯಾಗುತ್ತದೆ ಎಂದು ಹರ್ಲಾಪುರ ಮಠದ ರೇಣುಕ ಶಿವಯೋಗಿ ಸ್ವಾಮೀಜಿ ಹೇಳಿದರು.
ಸಮೀಪದ ಗೊಣಗನೂರು ಕರೆಮ್ಮದೇವಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಟ್ರಸ್ಟ್ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಯೋಜನಾಧಿಕಾರಿ ಸತೀಶ್ ಡಿ. ಸಂಸ್ಥೆಯ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು. ಚಂದ್ರಕಾಂತ ಚಿಲಮೂರ ಮಾತನಾಡಿದರು. ಗಂಗಪ್ಪ ಬೆಣ್ಣಿ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯೆ ರೇಷ್ಮಾ ಪಾಟೀಲ ಅಧ್ಯತೆ ವಹಿಸಿದ್ದರು. ದೇವಸ್ಥಾನದ ಜೀಣೋರ್ದ್ಧಾರಕ್ಕೆ ಒಂದು ಲದ ಡಿಡಿಯನ್ನು ಸಮಿತಿಯವರಿಗೆ ಹಸ್ತಾಂತರಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ತುಕಾರಾಮ ತಳವಾರ, ಹಸನಸಾಬ್ ಹವಾಲ್ದಾರ, ಮಾದೇವ ಸಿಂದೋಗಿ, ಬಾನುಬಿ ಬಳ್ಳೂರು, ಪೀರಸಾಬ್ ವಟ್ನಾಳ, ಎಕ್ಕೆರವ್ವ ಮಾದರ, ರಾಜು ಮಾದರ, ಮಕ್ತುಮಸಾಬ್ ಪಾಟೀಲ, ಮಕ್ತುಂಸಾಬ ಸೆಯ್ಯದ್, ಮಾಬುಸಾಬ್ ಪಾಟೀಲ, ಮಾರುತಿ ಚಿಲಮೂರು, ಭೀಮರಾವ ದಳವಿ, ಪೀರಸಾಬಿ ಕಿಚಡಿ, ಮೇಲ್ವಿಚಾರಕ ನಾಗೇಂದ್ರ ಇತರರಿದ್ದರು.