

ಹುಕ್ಕೇರಿ: ಹಳ್ಳಿಗಳು ಸಮಗ್ರ ಅಭಿವೃದ್ಧಿಯಾದರೆ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗುತ್ತದೆ ಎಂದು ಕುರಡಿಕೃಪಾ ಆಶ್ರಮದ ಶಿವಕುಮಾರ ಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಈಚೆಗೆ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಎಂ.ಕತ್ತಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ 2023-24ನೇ ಸಾಲಿನ ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಂಡಿದ್ದ ಏಳು ದಿನಗಳ ವಿಶೇಷ ಶಿಬಿರದಲ್ಲಿ ಅವರು ಆಶೀರ್ವಚನ ನೀಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಆರ್.ಎಸ್. ಹುದ್ದಾರ, ಪ್ರಾಧ್ಯಾಪಕ ಡಾ.ಯು.ಕೆ. ಪಾಟೀಲ, ಪ್ರಾಚಾರ್ಯ ಅಧ್ಯಕ್ಷತೆ ವಹಿಸಿದ್ದ ಡಾ. ವಿ.ಎಸ್. ಹೂಗಾರ ಮಾತನಾಡಿದರು. ಸಿದ್ಧಾರೂಢ ಮಠದ ಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ಮಾರುತಿ ಪೂಜೇರಿ, ರವೀಂದ್ರ ರಾಜಾಪೂರೆ, ಎನ್.ಎಸ್.ಎಸ್. ಸಹಾಯಕ ಅಧಿಕಾರಿಗಳಾದ ಎಸ್.ಸಿ. ಬಸಾಪೂರಿ, ಆರ್.ಎಸ್. ಬಂಡಿ, ಎಸ್. ಎಸ್. ಹಟ್ಟಿ, ಆರ್.ಕೆ. ಪಾಟೀಲ, ಎನ್.ಎಸ್. ಹಿರೇಮಠ, ವಿ.ಎ. ಪಾಟೀಲ ಇತರರಿದ್ದರು. ದಾಕ್ಷಾಯಣಿ ಚೌಗಲಾ ಸ್ವಾಗತಿಸಿದರು. ಅಂಜಲಿ ನಿರೂಪಿಸಿದರು. ಕಾವೇರಿ ಮಾದರ ವಂದಿಸಿದರು.