ನೃತ್ಯದಿಂದ ಮಾನಸಿಕ ನೆಮ್ಮದಿ

web3
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ದಾಂಡಿಯಾ ನೈಟ್ಸ್ ನೃತ್ಯ ಕಾರ್ಯಕ್ರಮಕ್ಕೆ ರೂಪಾ ಮುನವಳ್ಳಿ ಚಾಲನೆ ನೀಡಿದರು. ನಂದಾ ಚುನಮರಿ, ಶೋಭಾ ಕುರಬೇಟ, ಮಹಾದೇವಿ ಉಪ್ಪಿನ, ಸುಶ್ಮಿತಾ ಭಟ್ ಇತರರಿದ್ದರು.
Published on

ಗೋಕಾಕ: ದುರ್ಗಾದೇವಿಯನ್ನು ನೃತ್ಯದ ಮೂಲಕ ಆರಾಧಿಸಿ ದೇವಿ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಕೆಎಲ್‌ಇ ಶಾಲೆ ಪ್ರಾಚಾರ್ಯೆ ನಂದಾ ಚುನಮರಿ ಹೇಳಿದರು.

ನಗರದ ಕೆಎಲ್‌ಇ ಶಾಲೆ ಆವರಣದಲ್ಲಿ ಬಣಜಿಗ ಸಮಾಜ ಮಹಿಳಾ ಮಂಡಳ ವತಿಯಿಂದ ನವರಾತ್ರಿ ಉತ್ಸವ ಆಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ದಾಂಡಿಯಾ ನೈಟ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೃತ್ಯದ ಮೂಲಕ ದೇವಿಯನ್ನು ಆರಾಧಿಸಿದರೆ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಲಭಿಸುತ್ತದೆ. ಧಾರ್ಮಿಕ ಆಚರಣೆಗಳಿಂದ ಪರಸ್ಪರರಲ್ಲಿ ಪ್ರೀತಿ ಮತ್ತು ವಿಶ್ವಾಸ ವೃದ್ಧಿಸುತ್ತದೆ ಎಂದರು.

ರೂಪಾ ಮುನವಳ್ಳಿ ಚಾಲನೆ ನೀಡಿದರು. ಬಣಜಿಗ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಕುರಬೇಟ ಮತ್ತು ಉಪಾಧ್ಯಕ್ಷೆ ಮಹಾದೇವಿ ಉಪ್ಪಿನ, ಸುಶ್ಮಿತಾ ಭಟ್, ಪ್ರೀತಿ ಕುರಬೇಟ, ರಾಜೇಶ್ವರಿ ಕಿತ್ತೂರ, ಸೀಮಾ ಕಲ್ಯಾಣಶೆಟ್ಟಿ, ವಿಜಯ ಬಾಫನಾ, ಪದ್ಮಾ ಕೌಜಲಗಿ, ಹರ್ಷಿತಾ ಸವಣೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net