

ಮಾಂಜರಿ: ಕೌಶಲ ಅನಾವರಣಕ್ಕೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಸದಲಗಾ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಶಿಕ್ಷಕ ವೀರೇಶ ಪಾಟೀಲ ಹೇಳಿದರು.
ಸಮೀಪದ ಶಿರಗುಪ್ಪಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಿಯುಸಿ ಪ್ರಥಮ ವಿದ್ಯಾರ್ಥಿಗಳ ಸ್ವಾಗತ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಮನಃಪೂರ್ವಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಲ್ಲಿ ಪ್ರತಿಭೆ ಹೊರಬರಲು ಸಾಧ್ಯ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೀರೇಶ ಪಾಟೀಲ ಅವರನ್ನು ಸತ್ಕರಿಸಲಾಯಿತು. ಸದಸ್ಯರಾದ ಐ.ಎ.ಪಾಟೀಲ, ಎಸ್.ಬಿ.ಪಾಟೀಲ, ಆರ್.ಎಸ್.ಪಾಟೀಲ, ಆರ್.ಎಂ.ಪಾಟೀಲ, ಎಂ.ಬಿ.ಪಾಟೀಲ, ಪಿ.ಐ.ಪಾಟೀಲ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಬಿ.ಪಾಟೀಲ, ಪ್ರೊ.ಎಂ.ಎಸ್.ಮಠಪತಿ ಸ್ವಾಗತಿಸಿದರು. ಆರ್.ಡಿ.ಪಾಟೀಲ ಹಾಗೂ ಪ್ರೊ.ಆರ್.ಡಿ.ಪವಾರ ನಿರೂಪಿಸಿದರು. ಎಸ್.ಎಸ್.ಪಾಟೀಲ ವಂದಿಸಿದರು.