ಸಂಸ್ಕಾರವಂತರಿಂದ ಉತ್ತಮ ಸಮಾಜ ನಿರ್ಮಾಣ

2
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಜೈನ ಮುನಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
Published on

ರಾಯಬಾಗ: ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ ಎಂಬ ಅರಿಷಡ್ವರ್ಗಗಳ ವ್ಯಾಮೋಹದಿಂದ ಮೋಕ್ಷ ಪ್ರಾಪ್ತಿಯಾಗಲಾರದು ಎಂದು ವಿಶುದ್ಧ ಸಾಗರ ಮುನಿ ಮಹಾರಾಜರು ಹೇಳಿದರು.

ತಾಲೂಕಿನ ಬಾವನ ಸೌಂದತ್ತಿ ಗ್ರಾಮದ 1008 ಪಾರ್ಶ್ವನಾಥ ದಿಗಂಬರ ಜೈನ್ ಬಸದಿಗೆ ಶನಿವಾರ ಆಗಮಿಸಿ ಮಾತನಾಡಿ, ಸಂಸ್ಕಾರವಂತರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ 26 ಜೈನ ಮುನಿಗಳನ್ನು ಗ್ರಾಮಸ್ಥರು ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

ಸುರ್ವತ ಸಾಗರಜಿ, ಅನುತರ ಸಾಗರಜಿ, ಪ್ರಣಯ ಸಾಗರಜಿ, ಪ್ರಣವ ಸಾಗರಜಿ, ಸರ್ವಾರ್ಥ ಸಾಗರಜಿ, ಸಾಯ್ಮೆ ಸಾಗರಜಿ, ಸಂಕಲ್ಪ ಸಾಗರಜಿ, ಸಜಯಂತ ಸಾಗರಜಿ ಹಾಗೂ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ್ ಬಸದಿ ಮತ್ತು ಶ್ರೀ 1008 ತಾಮಣಿ ಪಾರ್ಶ್ವನಾಥ ದಿಗಂಬರ ಜೈನ ಗಾಜಿನ ಬಸತಿಯ ಎಲ್ಲ ಜೈನ ಶ್ರಾವಕ, ಶ್ರಾವಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net