ಕರೊನಾದಿಂದ ದೇಶಕ್ಕೆ ಸಿಗಲಿ ಮುಕ್ತಿ

1UGL1-WEb
ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ 2021 ಹೊಸ ವರ್ಷದ ನಿಮಿತ್ತ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ. ರವಿ ಕೋಟಾರಗಸ್ತಿ, ಚಿನ್ಮಯ ಮಾಮನಿ ಇತರರು ಇದ್ದರು.
Published on

ಉಗರಗೋಳ: ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇಶಕ್ಕೆ ಕಂಟಕವಾದ ಕರೊನಾದಿಂದ ಮುಕ್ತಿ ನೀಡಿ, ಸರ್ವರ ಬಾಳು ಬೆಳಗಿ, ನೆಮ್ಮದಿಯ ಬದುಕು ಕರುಣಿಸಲಿ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಪ್ರಾರ್ಥಿಸಿದರು.

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ 2021ನೇ ಹೊಸ ವರ್ಷದ ನಿಮಿತ್ತ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲೇ ನಾವು 2023ರ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ, ಮುಖ್ಯಮಂತ್ರಿ ಸ್ಥಾನದಲ್ಲಿ ಅವರೇ ಮುಂದುವರಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿದ್ದು, ನೂತನ ಕೃಷಿ ಮಸೂದೆ ರೈತರ ಹಿತ ಕಾಪಾಡಲಿದೆ, ಎಲ್ಲ ವರ್ಗಗಳ ಜನರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಶ್ರೀ ಕ್ಷೇತ್ರ ಯಲ್ಲಮ್ಮ ದೇವಿ ಹಾಗೂ ಜೋಗಳಬಾವಿ ಸತ್ತೆಮ್ಮದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನವನ್ನು ಕರೊನಾ ಹಿನ್ನೆಲೆಯಲ್ಲಿ ಜ.31 ವರೆಗೆ ಒಂದು ತಿಂಗಳು ಮುಂದೂಡಲಾಗಿದೆ. ಭಕ್ತ ಸಮುದಾಯ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಳಗೆ, ಚಿನ್ಮಯ ಆನಂದ ಮಾಮನಿ, ಜಗದೀಶ ಕೌಜಗೇರಿ, ಪರ್ವತಗೌಡ ಪಾಟೀಲ, ಸವದತ್ತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಸೋಮರಡ್ಡಿ ನಿಂಗರಡ್ಡಿ, ರಾಮಕೃಷ್ಣ ಸವದತ್ತಿ, ಪರಸನಗೌಡ(ಅಜ್ಜಪ್ಪಗೌಡ) ಪೋಲೇಶಿ, ಅಲ್ಲಮಪ್ರಭು ಪ್ರಭುನವರ ಆರ್.ಎಸ್. ಸವದತ್ತಿ, ಸದಾನಂದ ಈಟಿ, ಅರ್ಚಕರು, ದೇವಸ್ಥಾನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net