

ಸಿಂಧನೂರು: ದೇಶದಲ್ಲಿ ಮೂರು ಹೊಸ ಅಪರಾಧ ಕಾನೂನುಗಳನ್ನು ಜಾರಿ ಮಾಡಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಇದನ್ನು ಓದಿ: ವಾಣಿಜ್ಯ ಉದ್ದೇಶಕ್ಕೆ ಕೊಡವ ಲ್ಯಾಂಡ್ ದುರ್ಬಳಕೆ
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟಕರು, ಕೇಂದ್ರ ಸರ್ಕಾರವು ಯಾವುದೇ ವಿಸ್ತೃತ ಚರ್ಚೆಯಿಲ್ಲದೆ, ವಿರೋಧ ಪಕ್ಷ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಹೊಸ ಕಾನೂನುಗಳನ್ನು ಜಾರಿ ಮಾಡಿದೆ.
ಸಾಮಾಜಿಕ ನ್ಯಾಯ, ನಿಸರ್ಗದತ್ತವಾದ ಕಾನೂನಿಗೆ ಧಕ್ಕೆಯಾಗುವ ರೀತಿಯ ನಿರ್ಣಯ ಕೈಗೊಳ್ಳಲಾಗಿದೆ. ಅಧಿಕಾರಿಶಾಹಿ ಕಾನೂನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಹೊಸ ಕಾನೂನನ್ನು ಹಿಂಪಡೆಯಬೇಕು. ಮಾನವ ಹಕ್ಕು ಹೋರಾಟಗಾರ್ತಿ ಅರುಂಧತಿ ರಾಯ್, ಶಿಕ್ಷಣ ತಜ್ಞ ಶೌಕತ್ ಹುಸೇನ್ ಮೇಲಿನ ಯುಎಪಿಎ ಕೇಸ್ ರದ್ದು ಮಾಡುವಂತೆ ಒತ್ತಾಯಿಸಿದರು.