ಬಿಜೆಪಿಯಿಂದ ಅಪರಿಮಿತ ಅಭಿವೃದ್ಧಿ

29CKD33-Web
ಕೇರೂರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು, ಸಿದ್ರಾಮ ಗಡದೆ, ಎಂ.ಎ.ಪಾಟೀಲ, ಬಾಬಾಸಾಬ ಕೆಂಚಣ್ಣವರ, ರಾಜು ರೇಂದಾಳೆ ಉಪಸ್ಥಿತರಿದ್ದರು.
Published on

ಚಿಕ್ಕೋಡಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಹಿಂದೆ ಎಂದೂ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳು ಕೇವಲ ಒಂದು ವರ್ಷದಲ್ಲಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ತಾಲೂಕಿನ ಕೇರೂರ ಗ್ರಾಮದಿಂದ ಕೇರೂರ ಕ್ರಾಸ್‌ವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ 90 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವರ್ಷದಿಂದ ಕರೊನಾ ಮಹಾಮಾರಿ ಸೋಂಕು ಹರಡಿದ್ದರಿಂದ ಕಾಮಗಾರಿ ಬಾಕಿ ಉಳಿದಿವೆ. ಮುಂಬರುವ ದಿನಮಾನಗಳಲ್ಲಿ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಮುಖ್ಯ ಕಚೇರಿ ಉಪಾಧ್ಯಕ್ಷ ಸಿದ್ರಾಮ ಗಡದೆ, ಎಂ.ಎ.ಪಾಟೀಲ, ಬಾಬಾಸಾಬ ಕೆಂಚಣ್ಣವರ, ರಾಜು ರೇಂದಾಳೆ, ಕೇದಾರಿಗೌಡ ಪಾಟೀಲ, ಸದಾಶಿವ ಲಠ್ಠೆ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net