ಬಿಜೆಪಿಯಿಂದ ಶೇ.7 ಮೀಸಲಾತಿ

7RAIBAG1
Published on

ರಾಯಬಾಗ: ವಾಲ್ಮೀಕಿ ಸಮುದಾಯದವರು ಸರ್ಕಾರದ ಸೌಲಭ್ಯ ಪಡೆದು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಏಳಿಗೆ ಹೊಂದಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ನೀಡಿದ್ದು ಸದುಪಯೋಗ ಪಡೆಯಬೇಕೆಂದರು.

ತಹಸೀಲ್ದಾರ್ ಮಹಾದೇವ ಸನಮುರಿ, ಅಧಿಕಾರಿಗಳಾದ ವಿ.ಎಸ್.ಚಂದರಗಿ, ಡಾ.ಎಸ್.ಎಮ್.ಪಾಟೀಲ, ವಿನೋದ ಮಾವರಕರ, ಪರಮಾನಂದ ಮಂಗಸೂಳಿ, ಮುಖಂಡರಾದ ರಾಮಣ್ಣ ಗಸ್ತಿ, ರಾಮಚಂದ್ರ ನಾಯಿಕ, ಕಲ್ಲಪ್ಪ ಸನದಿ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಡಾ.ಎಂ.ಬಿ.ಪಾಟೀಲ, ಎಚ್.ಎಲ್.ಪೂಜಾರಿ, ಆರ್.ಬಿ.ಮನವಡ್ಡರ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಶರಣಪ್ಪ ಬಾಗೇವಾಡಿ, ರವಿ ತಳವಾರ, ಅಂಬರೀಶ ಕಾಂಬಳೆ, ನಾರಾಯಣ ಟೋಂಬ್ರೆ, ಮಲ್ಲಪ್ಪ ತಳವಾರ, ಶಿಕ್ಷಕರಾದ ರಾಜೇಂದ್ರ ಪಂಗಣ್ಣವರ, ಶಿವಾನಂದ ಹುಲಗಬಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net