

ಬೆಳಗಾವಿ: ಮಂಡ್ಯ ಜಿಲ್ಲೆಯ ಶ್ರೀಕ್ಷೇತ್ರ ಆರತಿಪುರ ಮಠದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರು ನಗರದ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ನಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಆಚಾರ್ಯ ವರ್ಧಮಾನ ಸ್ವಾಮೀಜಿ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿದರು.
ಬೋರ್ಡಿಂಗ್ ವತಿಯಿಂದ ಭಟ್ಟಾರಕ ಶ್ರೀಗಳನ್ನು ಗೌರವಿಸಲಾಯಿತು. ಕಾರ್ಯದರ್ಶಿ ಸನ್ಮತಿ ಕಸ್ತೂರಿ, ವಕೀಲ ಸಂಜಯ ಕುಚನೂರೆ, ಅಭಿನಂದನ ಜಾಬಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಭರತೇಶ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಶ್ರೀಗಳನ್ನು ಅಲ್ಲಿಯೂ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ವಿನೋದ ದೊಡ್ಡಣ್ಣವರ ಅವರು ಭರತೇಶ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ಖಜಾಂಚಿ ಶ್ರೀಪಾಲ ಖೇಮಲಾಪುರೆ, ಸಹ ಕಾರ್ಯದರ್ಶಿ ಬಿ.ಎಸ್. ಚೌಗುಲೆ, ಹೀರಾಚಂದ ಕಲಮನಿ, ಶರದ್ ಪಾಟೀಲ, ಪ್ರಮೋದ ಬೋರಣ್ಣವರ ಹಾಗೂ ಮೋಹನ ಬಖೇಡಿ ಇದ್ದರು.