ಹಿಂಬದಿಯಿಂದ ಕಾರು ಡಿಕ್ಕಿಯಾಗಿ ವೃದ್ಧ ಸಾವು

Crime Logo
Published on

ಶಿಗ್ಗಾಂವಿ: ಕಾರನ್ನು ರಿವರ್ಸ್​ ತೆಗೆದುಕೊಳ್ಳುವಾಗ ಹಿಂಬದಿ ನೋಡದೆ ವೃದ್ಧರೊಬ್ಬರ ಮೇಲೆ ಹಾಯಿಸಿದ ಪರಿಣಾಮ ವೃದ್ಧ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹುಲಗೂರ ಬಳಿ ಸೋಮವಾರ ನಡೆದಿದೆ.

ಗ್ರಾಮದ ಹನುಮಂತಪ್ಪ ರಾಮಣ್ಣ ಅಗಡಿ (60) ಮೃತ ವೃದ್ಧ.

ಇವರು ರಸ್ತೆ ಬದಿ ನಿಂತಿದ್ದಾಗ ಕಾರು ಚಾಲಕ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕೆಳಗೆ ಬಿದ್ದ ವೃದ್ಧನ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಆದ್ದರಿಂದ ವೃದ್ಧ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹುಲಗೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net