

ಚಿಕ್ಕೋಡಿ: ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಬ್ಯಾಂಕ್‌ಗಳು ಪೂರಕ ಮೂಲಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು, ಬೆಳಗಾವಿ ಜಿಲ್ಲಾಡಳಿತ, ನಗರಸಭೆ, ವಿವಿಧ ಬ್ಯಾಂಕ್‌ಗಳ ಸಹಯೋಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಎಎಚ್‌ಪಿ ಘಟಕದಡಿ ನಿರ್ಮಾಣವಾಗುತ್ತಿರುವ 2,052(ಜಿ+2) ಮಾದರಿಯ ಗುಂಪು ಮನೆಗಳ ಫಲಾನುಭವಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಸಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡಜನರ ಗುಂಪು ಮನೆಗಳ ಕನಸು ನನಸಾಗಿಸುವಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ತರವಾದದ್ದು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೂರಿಲ್ಲದವರಿಗೆ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಂಕಷ್ಟದಲ್ಲಿರುವ ಜನರ ಕನಸು ಇಂದು ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ, ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆ ಜಾರಿಗೆ ತಂದಿರುವ ಪ್ರಧಾನಿ ಮೋದಿಯವರ ಕನಸು ನನಸಾಗುತ್ತಿದ್ದು, ಈ ಮಹತ್ತರ ಯೋಜನೆಗೆ ಬ್ಯಾಂಕ್‌ಗಳಿಂದ ಅಗತ್ಯ ಸಹಕಾರ ನೀಡುತ್ತಿವೆ ಎಂದರು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷ ನೀತಾ ಬಾಗಡೆ, ಸಭಾಪತಿ ಸದ್ದಾಂ, ಮಹಾದೇವಿ ನೇರ್ಲಿ, ಅಸ್ಲ್‌ಂ ಹವಾಲ್ದಾರ್, ಉದಯ ಶಿಂಧೆ, ಗಣಪತಿ ಗೋಸವಲೆ, ನಗರಸಭೆ ಪೌರಾಯುಕ್ತ ಮಹಾವೀರ ಬೋರಣ್ಣವರ, ಬಿ.ಡಿ.ಕುಲಕರ್ಣಿ, ಸೋನಲ್ ಕೊಠಾಡಿ, ಚಂದ್ರಶೇಖರ, ಚಂದ್ರಕಾಂತ ಬುಡ್ಡಣ್ಣವರ, ಬಾಬಾಸಾಹೇಬ ಮಾನೆ, ವಿವಿಧ ಬ್ಯಾಂಕ್‌ಗಳ ವಿಭಾಗೀಯ ವ್ಯವಸ್ಥಾಪಕರು, ನಗರಸಭೆ ಆಶ್ರಯ ಕಮಿಟಿ ಸದಸ್ಯರು, ಜನಪ್ರತಿನಿಧಿಗಳು, ಫಲಾನುಭವಿಗಳು ಇದ್ದರು.