ಏ.1ರಿಂದ ಪ್ರವಚನ ಕಾರ್ಯಕ್ರಮ

27GKK2
Published on

ಗೋಕಾಕ: ಇಲ್ಲಿನ ರಾಜ್ಯ ಬಣಜಿಗ ಸಮಾಜದ ೇಮಾಭಿವದಿಟಛಿ ಸಂದ ಮಹಿಳಾ ಟಕದಿಂದ ಅಕ್ಕಮಹಾದೇವಿ ಜಯಂತಿ ನಿಮಿತ್ತ ಏ.1ರಿಂದ 5ರ ವರೆಗೆ ನಗರದ ಬಸವ ಮಂದಿರದಲ್ಲಿ ಹಾರೂಗೇರಿಯ ಪ್ರೊ.ಐ.ಆರ್​. ಮಠಪತಿ ಅವರಿಂದ ಬೆಳಗ್ಗೆ 6.30 ರಿಂದ 9ಗಂಟೆ ವರೆಗೆ ಸಹಜ ಶಿವಯೋಗ ಮತ್ತು ಸಂಜೆ 6ರಿಂದ 7ರ ವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಸಂದ ಅಧ್ಯೆ ಮಹಾದೇವಿ ಉಪ್ಪಿನ ತಿಳಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.1ರಂದು ಬೆಳಗ್ಗೆ ಮಂಜುಳಾ ಗೋಟಡಕಿ ಕಾರ್ಯಕ್ರಮ ಉದ್ಘಾಟಿಸುವರು. ಏ.5ರಂದು ಶಿಬಿರ ಸಮಾರೋಪದ ಸಾನ್ನಿಧ್ಯವನ್ನು ಮುರುರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಅಂದು ಸಂಜೆ 5ಗಂಟೆಗೆ ಜರುಗಲಿರುವ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ವೀಣಾ ಸವಣೂರ ಉದ್ಘಾಟಿಸಲಿದ್ದು, ಪ್ರೊ.ಐ.ಆರ್​. ಮಠಪತಿ ಮತ್ತು ಚಿಕ್ಕೋಡಿಯ ಡಾ.ದಯಾನಂದ ನೂಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಟ್ಯಾಂಜಲಿ ನತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಸಂದ ಉಪಾಧ್ಯೆ ದೀಪಾ ಬೆಲ್ಲದ, ಕಾರ್ಯದರ್ಶಿ ಹರ್ಷಿತಾ ಸವಣೂರ, ಗೀತಾ ಅಂಗಡಿ, ಗೀತಾ ಅಮರಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net