ಏ.1 ರಿಂದ ಕರೆಗಳಿಗೆ ಕಾಲುವೆ ನೀರು ಹರಿಸಿ ಭರ್ತಿ ಮಾಡಿ

From April 1, fill the canal with water to fill the canals.
ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಪಾಂಡು ಹ್ಯಾಟಿ, ಶ್ರೀನಿವಾಸ ಗೊಟಗುಣಕಿ ಮತ್ತಿತರರಿದ್ದರು.
Published on

ವಿಜಯಪುರ: ಜಿಲ್ಲೆಯಲ್ಲಿನ ಎಲ್ಲ ಕೆರೆಗೆಳಿಗೆ ಏ. 1 ರಿಂದ ಕಾಲುವೆ ನೀರು ಹರಿಸಿ ಸಂಪೂರ್ಣ ಭರ್ತಿ ಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಬಹುತೇಕ ಕೆರೆಗಳಲ್ಲಿನ ನೀರು ಬರಿದಾಗಿದ್ದು, ಅದರಿಂದ ಹಳ್ಳಿಗಳಲ್ಲಿ ಜನ&ಜಾನುವಾರುಗಳಿಗೆ ಕುಡಿಯಲು ನೀರಿನ ತತ್ವಾರ ಎದುರಾಗಿದೆ. ಈಗಾಗಲೇ ಐಸಿಸಿ ಸಭೆ ತೀರ್ಮಾನದಂತೆ ಕೃಷಿಗಾಗಿ ನೀರು ಹರಿಸಿದ್ದೇವೆಂದು ಕೆಬಿಜೆಎನ್​ಎಲ್​ ಅಧಿಕಾರಿಗಳು ಹೇಳುತ್ತಿದ್ದು, ಸದ್ಯ ಕಾಲುವೆಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಲಾಗುವುದೆಂದು ಹೇಳಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ಕೃಷಿಗಾಗಿ ಈಗಾಗಲೇ ನೀರು ಹರಿಸಿದ್ದಾಗಿ ತಿಳಿಸಿದ್ದರೂ ಜಿಲ್ಲೆಯಲ್ಲಿ ಸಮರ್ಪಕ ನೀರು ಬಿಟ್ಟಿಲ್ಲ. ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಈ ಬಗ್ಗೆ ಕೆಬಿಜೆಎನ್​ಎಲ್​ ಅಧಿಕಾರಿಗಳನ್ನು ವಿಚಾರಿಸಿದಾಗ ಏ. 10 ರಿಂದ ಕೆರೆಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದ್ದಾರೆ. ಏ. 10 ರ ವರೆಗೆ ನೀರು ಹರಿಸದಿದ್ದರೆ ಕುಡಿಯುವ ನೀರಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ಹಳ್ಳಿಗಳಲ್ಲಿ ಜಾನುವಾರುಗಳಿಗೆ ನೀರು ಸಿಗದೆ ಬೇರೆಡೆಯಿಂದ ತಂದು ಕುಡಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಮಸ್ಯೆ ಕುರಿತು ಕೂಡಲೇ ಎಚ್ಚೆತ್ತಕೊಂಡು ಏಪ್ರಿಲ್​ 10ರ ಬದಲಾಗಿ ಏ. 1 ರಿಂದಲೇ ಕಾಲುವೆಗಳಿಗೆ ನೀರು ಹರಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರು ಕೂಡಲೇ ನೀರು ಹರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎಸ್​.ಎಸ್​. ಕೊಳ್ಳಿ, ರೈತ ಮುಖಂಡರಾದ ಗುಲಿಂಗಪ್ಪ ಪಡಸಲಗಿ, ಶ್ರೀನಿವಾಸ ಗೊಟಗುಣಕಿ, ರಾಜೇಂದ್ರ ದೇಸಾಯಿ, ಮಡಿವಾಳಪ್ಪ ಕಲಬುರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net