ವ್ಯಸನಗಳಿಂದ ದೂರವಿದ್ದರೆ ನೆಮ್ಮದಿ

25Kagavad2
Published on

ಕಾಗವಾಡ: ಯುವ ಜನತೆ ವ್ಯಸನಗಳಿಗೆ ದಾಸರಾಗಿ ಶಾರೀರಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಕಳವಳಕಾರಿ. ಎಲ್ಲರೂ ವ್ಯಸನಗಳಿಂದ ದೂರವಿದ್ದು, ನೆಮ್ಮದಿ ಜೀವನ ಸಾಗಿಸಬೇಕು ಎಂದು ಮಿರಜ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದರು.

ಮಹಾರಾಷ್ಟ್ರದ ಮಿರಜ ತಾಲೂಕಿನ ಟಾಕಳಿ- ಬೋಲವಾಡದ ಶ್ರೀ ಮಲ್ಲಿಕಾರ್ಜುನ ಗುರುದೇವ ತಪೋವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯುವಕರಲ್ಲಿ ವ್ಯಸನಮುಕ್ತಿ ಮತ್ತು

ನೆಮ್ಮದಿಯ ಜೀವನದ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು. ಶಿವದೇವ ಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net