4ರಿಂದ ಮಯೂರ ಶಿಲೆ ನಾಡೋತ್ಸವ

Navalkalmata swamiji
ಅಭಿನವ ಸೋಮನಾಥ ಶಿವಾಚಾರ್ಯರು
Published on

ಸಿರವಾರ: ತಾಲೂಕಿನ ನವಲಕಲ್ ಬೃಹನ್ಮಠದ ಲಿಂ. ಸೋಮಶೇಖರ ಶಿವಾಚಾರ್ಯರ 28ನೇ ಜಾತ್ರೆ ಅಂಗವಾಗಿ ಮಾ.4ರಿಂದ ಮಯೂರ ಶಿಲೆ ನಾಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಹೇಳಿದರು.

ಪಟ್ಟಣದ ನವಲಕಲ್ ಶಾಖಾಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಾ.4ರಂದು ಬೆಳಗ್ಗೆ ಕಿಲಾರಿ ಎತ್ತುಗಳ ಒಂದು ಟನ್ ಭಾರ ಎಳೆಯುವ ಸ್ಪರ್ಧೆ, ಮಾ.5 ರಂದು ರಾಜ್ಯಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ಮಾ.6ರಂದು ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ, ಸಂಜೆ ಲಿಂ.ಸೋಮಶೇಖರ ಶಿವಾಚಾರ್ಯರ ಉಚ್ಚಾಯ ಮಹೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.

ಮಾ.7ರಂದು ಬೆಳಗ್ಗೆ 6 ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ, ಶಾಂಭವಿ ಮೂರ್ತಿ ಹಾಗೂ ಲಿಂ. ಸೋಮಶೇಖರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಲಿದೆ. ನಂತರ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಜರುಗಲಿದೆ. ಸಂಜೆ ಅಪಾರ ಭಕ್ತರ ಮಧ್ಯೆ ಮಹಾ ರಥೋತ್ಸವ ಜರುಗಲಿದೆ. ನಾಡಿನ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net