29ರಿಂದ ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನ

26 Jaggu 2
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ.
Published on

ಬೆಳಗಾವಿ: ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಜ್ಯ ಕೃಷಿ, ತೋಟಗಾರಿಕೆ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಮೇ 29ರಿಂದ ಜೂ.12ರವರೆಗೆ ‘ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬೆಳಗಾವಿ, ಬೈಲಹೊಂಗಲ, ಖಾನಾಪುರ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳಲ್ಲಿನ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ರೈತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರೊಂದಿಗೆ ಅಕ ಇಳುವರಿ ಪಡೆಯುವ ಹಾಗೂ ವೌಲ್ಯವರ್ಧನೆ ಮಾಡಿ ಗುಣಮಟ್ಟದ ಆದಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ. ಕಿಸಾನ್ ಡ್ರೋನ್ ಬಳಸುವ ಮೂಲಕ ಸಸ್ಯ ಸಂರಕ್ಷಣೆ ಹಾಗೂ ರಸಗೊಬ್ಬರಗಳ ಪೂರೈಕೆ, ಹೊಸ ತಂತ್ರಜ್ಞಾನ, ನಿಖರ ಹವಾಮಾನ ಮಾಹಿತಿ ಹಾಗೂ ಸರ್ಕಾರದ ವಿವಿಧ ಲಾಭದಾಯಕ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು.

ಮತ್ತಿಕೊಪ್ಪ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ನೇತೃತ್ವದಲ್ಲಿ ವಿಜ್ಞಾನಿಗಳಾದ ಡಾ.ಎಸ್.ಎಸ್.ಹಿರೇಮಠ, ಎಸ್.ಎಂ. ವಾರದ, ಜಿ.ಬಿ.ವಿಶ್ವನಾಥ ಹಾಗೂ ಪ್ರವೀಣ ಯಡಹಳ್ಳಿ ಭಾಗವಹಿಸುವರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ ಬೆಂಗಳೂರು ಕೇಂದ್ರದಿಂದ ಡಾ.ಎಂ.ಭಗತ್, ಡಾ.ಜಿ.ಮಹೇಂದ್ರನ್, ಡಾ.ವಿನಯ, ಡಾ.ಮುರಳೀಧರನ್, ಡಾ.ಎ.ಪಿ.ಕೊಲ್ಟೆ, ಡಾ.ಆನಂದಕುಮಾರ ಪಾಲ್ಗೊಳ್ಳುವುದು ಎಂದು ಡಾ.ಮಂಜುನಾಥ ಚೌರಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net