ಮುರಗೋಡ: ಗ್ರಾಮದಲ್ಲಿ ಫೆ.26 ರಿಂದ 28ರ ವರೆಗೆ ಐತಿಹಾಸಿಕ ದೇವಸ್ಥಾನ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ. ಫೆ.26ರಂದು ಬೆಳಗ್ಗೆ ಮಹಾ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ.
ಮಹಾ ಶಿವರಾತ್ರಿ ಅಂಗವಾಗಿ ಗ್ರಾಮದ ಭಜನಾ ಮಂಡಳಿ ವತಿಯಿಂದ ಸಂಗೀತ ಸಂಜೆ, ಜಾಗರಣೆ ನಡೆಯಲಿದೆ. ಫೆ.27ರಂದು ಮಲ್ಲಿಕಾರ್ಜುನಸ್ವಾಮಿ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಜರುಗಲಿದೆ.
ಮಧ್ಯಾಹ್ನ ಉಚಿತ ಸಾಮೂಹಿಕ ವಿವಾಹ, ಮಹಾಪ್ರಸಾದ ನಡೆಯಲಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಫೆ.28ರಂದು ಧರ್ಮಸಭೆ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೆಂಗೇರಿಯ ಶಿವಚಿದಂಬರೇಶ್ಚರ ಮಠದ ದಿವಾಕರ ದಿತ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ದೂಡವಾಡದ ಜಡಿಸಿದ್ಧೇಶ್ಚರ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ, ಮಹಾಂತಯ್ಯ ಶಾಸಿ ಆರಾದ್ರಿಮಠ ನೇತೃತ್ವ ವಹಿಸುವರು. ಉದ್ಘಾಟಕರಾಗಿ ಶಾಸಕ ಮಹಾಂತೇಶ ಕೌಜಲಗಿ, ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿ.ಐ.ಪಾಟೀಲ, ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಮಹಾಂತೇಶ ದಾಡಿಗುಂಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.