

ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅ.15 ರಿಂದ 26ರ ವರೆಗೆ ಶರನ್ನವರಾತ್ರಾ ಮಹೋತ್ಸವ, ಶ್ರೀಮನ್ ಮಹಾಚಂಡಿಕಾ ಹೋಮ, ಪಟ್ಟಾಭಿಷೇಕೋತ್ಸವ, ಜೀವ-ಭಾವ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
15 ರಂದು ಹಂಸಾರೂಢಾ ಸರಸ್ವತೀ ಅಲಂಕಾರ ಪೂಜೆ, ಶ್ರೀ ಪಂಚದುರ್ಗಾ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗಾಯನ ಮತ್ತು ವೀಣಾ ವಾದನ, ಸಂಜೆ ಭರತನಾಟ್ಯ ಕಾರ್ಯಕ್ರಮ, 16 ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ, ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಯಲಿನ್ ವಾದನ, ಸಂಜೆ ಭರತನಾಟ್ಯ, 17 ರಂದು ಸಿಂಹರೂಢಾ ಚಂದ್ರಘಂಟಾ ಅಲಂಕಾರ, ಶ್ರೀ ಪುರುಷಸೂಕ್ತ ಹೋಮ, ಕರ್ನಾಟಕ ಶಾಸೀಯ ಸಂಗೀತ, ಸಂಜೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
18 ರಂದು ಮೃಗಾರೂಢಾ ಕೂಷ್ಮಾಂಡ ಅಲಂಕಾರ, ಶ್ರೀ ಸೂಕ್ತ ಹೋಮ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿ ಸಂಗೀತ, ಸಂಜೆ ಭರತನಾಟ್ಯ, 19 ಮಕರಾರೂಢಾ ಸ್ಕಂದಮಾತಾ ಅಲಂಕಾರ, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಲಿತಾ ಮೂಲಮಂತ್ರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕರ್ನಾಟಕ ಶಾಸೀಯ ಸಂಗೀತ, ಸಂಜೆ ವೀಣಾವಾದನ ನಡೆಯಲಿದೆ.
20ಕ್ಕೆ ಮಯೂರಾರೂಢಾ ಕಾತ್ಯಾಯಿನೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸರಸ್ವತಿ ಮೂಲಮಂತ್ರ ಹೋಮ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಯಾಕೋ್ಸೆೆನ್ ವಾದನ, ಸಂಜೆ ಯಕ್ಷಗಾನ, 21ರಂದು ಅಶ್ವಾರೂಢಾ ಗೌರೀ ಅಲಂಕಾರ, ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶಾರದಾ ಪೂಜೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ನಾಟಕ ಶಾಸೀಯ ಸಂಗೀತ, ಸಂಜೆ ಭರತನಾಟ್ಯ ನಡೆಯಲಿದೆ.
22ರಂದು ವೃಷಭಾರೂಢಾ ತ್ರಿಮೂರ್ತಿ ಅಲಂಕಾರ, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮೂಲಮಂತ್ರ ಹೋಮ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶಾಸೀಯ ಸಂಗೀತ, ಸಂಜೆ ಯಕ್ಷಗಾನ, 23ರಂದು ಸಿಂಹಾರೂಢಾ ಸ್ಧಿಧಾತ್ರೀ ಅಲಂಕಾರ, ಶ್ರೀ ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವೇಣುವಾದನ, ಸಂಜೆ ಭರತನಾಟ್ಯ.
24 ವಿಜಯದಶಮಿ ವಿಜಯೋತ್ಸವ, ಪಂಜಿನ ಮೆರವಣಿಗೆ, ಬೆಳಗ್ಗೆ ವಯಲಿನ್ ವಾದನ, ಸಂಜೆ ಭರತನಾಟ್ಯ. 25ರಂದು ಉದ್ಭವ ಗಣಪತಿ ಮತ್ತು ಆಂಜನೇಯ ಸ್ವಾಮಿ ಸನ್ನಿಯಲ್ಲಿ ವಿಶೇಷ ಪೂಜೆ, ಶ್ರೀ ಗಣಪತಿ ಅಥರ್ವಶೀರ್ಷ ಹೋಮ, ಪವಮಾನ ಅಭಿಷೇಕ, ಶ್ರೀ ರುದ್ರಹೋಮ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಹರಿಕಥೆ, ನೃತ್ಯ ರೂಪಕ ಜೈ ಜಗನ್ಮಾತೆ, 26 ರಂದು ಅಭಿಷೇಕ ಸಹಿತ ವಿಶೇಷ ಪೂಜೆ ಶ್ರೀಮನ್ ಮಹಾಚಂಡಿಕಾ ಹೋಮ, ನವಗ್ರಹ ಹೋಮ, ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ ಮತ್ತು ಪಟ್ಟಾಭಿಷೇಕೋತ್ಸವ. ಜೀವ-ಭಾವ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಭರತನಾಟ್ಯ ಮತ್ತು ಯಕ್ಷಗಾನ ನಡೆಯಲಿದೆ.
ನವರಾತ್ರಿಯ ಪ್ರತಿ ದಿನ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ನಾದಸ್ವರ ವಾದನ, ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ.